ಗೊಂಡರ ರಾಮಾಯಣ

Author : ಹಿ.ಚಿ. ಬೋರಲಿಂಗಯ್ಯ

Pages 187

₹ 100.00




Year of Publication: 2009
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿ ತಿಮ್ಮಪ್ಪಗೊಂಡ ಹಾಡಿದ ಗೊಂಡರ ರಾಮಾಯಣವನ್ನು ಸಂಪಾದಿಸಲಾಗಿದ್ದು ಮೌಖಿಕ ಪರಂಪರೆಯಲ್ಲಿ ಕಾಲದಿಂದ ಕಾಲಕ್ಕೆ, ಬಾಯಿಂದ ಬಾಯಿಗೆ ಬೆಳೆದು ಬಂದ ಹಲವು ಬುಡಕಟ್ಟು ಸಹ ರಾಮಾಯಣಗಳಿವೆ. ಇಂಥ ಅನೇಕ ಬುಡಕಟ್ಟು ರಾಮಾಯಣಗಳ ಸ್ವರೂಪವನ್ನು ಅವುಗಳ ಬಗ್ಗೆ ವಿದ್ವಾಂಸರು, ಸಂಶೋಧಕರು, ಚಿಂತಕರು ಹಾಗೂ ಇತಿಹಾಸಕಾರರು ಪಟ್ಟಿರುವ ಅಭಿಪ್ರಾಯಗಳನ್ನು ಈ ತಿಮ್ಮಪ್ಪಗೊಂಡರ ರಾಮಾಯಣದ ಮುಖೇನವೇ ಪ್ರಸ್ತಾಪಿಸಿ ತುಲನೆ ಮಾಡುವ ಸಂಕ್ಷಿಪ್ತ ರೂಪದ ಬರಹವೂ ಈ ಗ್ರಂಥದಲ್ಲಿದೆ.

ಮೊದಲ ಮುದ್ರಣ: 1999

About the Author

ಹಿ.ಚಿ. ಬೋರಲಿಂಗಯ್ಯ
(25 October 1955)

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. ತುಮಕೂರು ಜಿಲ್ಲೆಯ ತಲಪುರ ಮೂಲದವರಾದ ಬೋರಲಿಂಗಯ್ಯ ಅವರ ತಂದೆ ಚಿಕ್ಕೇಗೌಡ ಮತ್ತು ತಾಯಿ ಕಾಳಮ್ಮ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ, ನಾಟಕ ಅಕಾಡೆಮಿ ರಿಜಿಸ್ಟಾರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಪ್ರತಿನಿಧಿಯಾಗಿ ಫ್ರಾನ್ಸ್‌, ಇಟಲಿ, ಹಾಲೆಂಡ್, ಸೌದಿ, ದುಬಾಯ್, ಇರಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ...

READ MORE

Related Books