ಗೊರುಕನ 1974

Author : ರಂಗನಾಥ ಶಿವಮೊಗ್ಗ

Pages 64

₹ 70.00




Year of Publication: 2019
Published by: ಹೊಂಗಿರಣ ಪ್ರಕಾಶನ
Address: ಶಿವಮೊಗ್ಗ
Phone: 8971602628

Synopsys

ಕಾಡಿನಲ್ಲಿಯ ಜನ ತಮ್ಮನ್ನು ಬದುಕಿಸಿಕೊಳ್ಳುವುದರ ಜೊತೆಗೆ ಸುತ್ತಲಿನ ಪರಿಸರವನ್ನು ಹೇಗೆ ಉಳಿಸಿಕೊಳ್ಳುತ್ತಾರೆ? ನಾಗರಿಕ ಸಮಾಜ ಕಾಡನ್ನು ಹಾಗೂ ಅಲ್ಲಿಯ ಜನರನ್ನು ಗಂಭೀರವಾಗಿ ತೆಗೆದುಕೊಂಡು ಅವರನ್ನು ಉಳಿಸುವುದರ ಜತೆಗೆ ತಾವು ಉಳಿದುಕೊಳ್ಳಬೇಕು ಎಂಬ ಅಂಶವಿರುವ ನಾಟಕ 'ಗೊರುಕನ 1974'.

ಪ್ರಕೃತಿ ವಿಕೋಪಗಳು ಏಕೆ ಉಂಟಾಗುತ್ತಿವೆ? ಎಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹಾಗಾಗದಂತೆ ಬದುಕುವುದು ಮುಖ್ಯ ಎಂದು ಹೇಳುವುದು ಇಂದಿನ ಅಗತ್ಯವೆನಿಸುತ್ತದೆ. ಅಂತಹ ಪ್ರಯತ್ನವನ್ನು ಲೇಖಕರು ಈ ಕೃತಿಯ ಮೂಲಕ ಮಾಡಿದ್ದಾರೆ. ಮದುವೆಯ ಬಗ್ಗೆ ನಾಟಕದಲ್ಲಿ ಚರ್ಚಿಸುತ್ತಾ, ಹೆಣ್ಣು ಗಂಡುಗಳ ಆಯ್ಕೆ, ಅವರ ಅನ್ಯೋನ್ಯ ಸಂಬಂಧ ಬೆಳೆಸುವ ಬಗ್ಗೆ ಆತ್ಮೀಯವಾಗಿ ಮೂಡಿಸಿದ್ದಾರೆ. ಪರಿಸರದ ಹಸಿರಿನ ಉಳಿವು ಹಾಗೂ ಈ ಮಧ್ಯೆ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದರ ಕುರಿತು ಈ ಕೃತಿಯು ಅರಿವು ಮೂಡಿಸುತ್ತದೆ.

About the Author

ರಂಗನಾಥ ಶಿವಮೊಗ್ಗ

ರಂಗಕರ್ಮಿ, ಯುವ ಬರಹಗಾರ ರಂಗನಾಥ ಅವರು ಶಿವಮೊಗ್ಗದವರು. ಹುಟ್ಟೂರಿನಲ್ಲಿಯೇ ಪದವಿ ಶಿಕ್ಷಣ ಪೂರೈಸಿ, ನೀನಾಸಂ ರಂಗಶಿಕ್ಷಣ ಸಂಸ್ಥೆಯಲ್ಲಿ ನಿದೇರ್ಶನ ಪದವಿ ಪಡೆದಿದ್ದಾರೆ. ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಳಿಲು ರಾಮಾಯಣ ಮುಂತಾದ ಹಲವಾರು ನಾಟಕಗಳನ್ನು ನಿದೇರ್ಶಿಸಿದ್ದಾರೆ. ಇವರ ಚೊಚ್ಚಲ ನಾಟಕ ಗೊರುಕನ 1974 ...

READ MORE

Related Books