ಗೌಡ (ಪ್ರಶಸ್ತಿ ಪುರಸ್ಕೃತರ ಪರಿಚಯ)

Author : ಶರಣಗೌಡ ಎಸ್. ಪಾಟೀಲ, ಪಾಳಾ

Pages 116

₹ 120.00




Year of Publication: 2020
Published by: ಸುಭಾಷ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್
Address: ಪಾಳಾ, ತಾಲೂಕು ಕಲಬುರಗಿ, ಜಿಲ್ಲೆ: ಕಲಬುರಗಿ

Synopsys

ಲೇಖಕ ಡಾ. ಶರಣಗೌಡ ಎಸ್. ಪಾಟೀಲ್, ಪಾಳಾ ಅವರು ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದ ಕೃತಿ-ಗೌಡ. ಕಳೆದ ಮೂರು ವರ್ಷಗಳಲ್ಲಿ ‘ಗೌಡ’ ಪ್ರಶಸ್ತಿ ಪುರಸ್ಕೃತರಾದ ಒಟ್ಟು 26 ಮಹನೀಯರ ಪರಿಚಯದ ಕೃತಿ ಇದು. ಮುಂದಿನ ಪೀಳಿಗೆಗೆ ಸಾಧಕರ ಪರಿಚಯ ಮಾಡಿಕೊಡಬೇಕೆಂಬ ಹಂಬಲ ಇಲ್ಲಿದೆ. 

ನಿವೃತ್ತ ನ್ಯಾಯಮೂರ್ತಿ ಡಾ ಶಿವರಾಜ್ ಪಾಟೀಲ್, ಧುರೀಣ  ಎಸ್ ಕೆ ಕಾಂತ, ನಿವೃತ್ತ ನ್ಯಾಯಮೂರ್ತಿ  ಅರಳಿ ನಾಗರಾಜ್, ಖ್ಯಾತ ಸಾಹಿತಿ ಗೋ ರು ಚೆನ್ನಬಸಪ್ಪ, ಖ್ಯಾತ ವೈದ್ಯ ಡಾ. .ಎಸ್ ಎಸ್ ಗುಬ್ಬಿ, ಮಾರುತಿರಾವ್ ಮಾಲೆ, ಸಿದ್ದರಾಮ ಪೊಲೀಸ್ ಪಾಟೀಲ್, ರೇವಯ್ಯ ವಸ್ತ್ರದ್, ಬಸವರಾಜ್ ಕೋನೆಕ, ಎ ಎಸ್ ಭದ್ರ ಶೆಟ್ಟಿ,  ಹುಸೇನ್ ಭಾಷಾ ಮುರುಗಾನೂರ, ಶಿವಶರಣಪ್ಪ ಸರಸಂಬ, ಪ್ರಶಾಂತ್ ಗೋಲ್ಡ್ಸ್ಮಿತ್- ಚಿತ್ರಕಲಾ ಸೇರಿದಂತೆ ಒಟ್ಟು 40  ಸಾಧಕರು ಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

About the Author

ಶರಣಗೌಡ ಎಸ್. ಪಾಟೀಲ, ಪಾಳಾ
(18 June 1975)

ಲೇಖಕ ಶರಣಗೌಡ ಎಸ್. ಪಾಟೀಲ್, ಪಾಳಾ ಅವರು ಮೂಲತಃ ಕಲಬುರಗಿ ತಾಲೂಕಿನ ಪಾಳಾ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಲಬುರಗಿಯಲ್ಲಿ ಪ್ರೌಢ, ಹಾಗೂ ಪದವಿ ಶಿಕ್ಷಣ ಪಡೆದರು. ತಂದೆ ಸುಭಾಶ್ಚಂದ್ರ ಪಾಟೀಲ್ ಅವರ ಹೆಸರಿನಲ್ಲಿ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿ ವರ್ಷವೂ ‘ ಗೌಡ ’ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಕೃತಿಗಳು: ‘ಅವಿಸ್ಮರಣೀಯರು, ಗೌಡ (ಸಾಧಕರ ಪರಿಚಯ) ಕೃತಿಗಳನ್ನು ರಚಿಸಿದ್ದಾರೆ. ಟ್ರಸ್ಟ್ ವತಿಯಿಂದ ಕೃತಿಗಳನ್ನು ಪ್ರಕಾಶಿಸಿದ್ದಾರೆ. ಇವರ ಸೇವೆ ಗಮನಿಸಿ ವಿವಿಧ ಸಂಘ-ಸಂಸ್ಥೆಗಳು ಶಿಕ್ಷಣ ರತ್ನ, ಕಾಯಕರತ್ನ, ರಾಷ್ಟ್ರಮಟ್ಟದ 'ಜ್ಯೋತಿಬಾ ಪುಲೆ' ಪ್ರಶಸ್ತಿ ಲಭಿಸಿವೆ. ...

READ MORE

Related Books