ಗ್ರಹಿಕೆ ಗೊಂಚಲು

Author : ಬಿ.ಟಿ. ಲಲಿತಾ ನಾಯಕ್

Pages 150

₹ 150.00




Year of Publication: 2016
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಸೇಡಂ ರಸ್ತೆ, ಕಲಬುರಗಿ

Synopsys

ಖ್ಯಾತ ಲೇಖಕಿ-ಕಥೆಗಾರ್ತಿ ಬಿ.ಟಿ. ಲಲಿತಾ ನಾಯಕ್ ಅವರು ಬರೆದಿರುವ ಲೇಖನಗಳ ಸಂಗ್ರಹ ಕೃತಿ-ಗ್ರಹಿಕೆ ಗೊಂಚಲು. ವಿಶಾಷಾಂಕ, ಸಂಪಾದನೆ ಹೀಗೆ ಸಾಂದರ್ಭಿಕತೆಯ ಹಿನ್ನೆಲೆಯಲ್ಲಿ ಬರೆದ ಒಟ್ಟು 16 ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. ತ್ರಿವೇಣಿ, ಎಂ.ಕೆ.ಇಂದಿರಾ, ತ.ರಾ.ಸುಬ್ಬಾರಾವ್, ಅ.ನ.ಕೃಷ್ಣರಾಯ ಸೇರಿದಂತೆ ಸಾಹಿತ್ಯ ದಿಗ್ಗಜರ ಖ್ಯಾತ ಕೃತಿಗಳ ಕುರಿತೂ ಬರೆದ ವಿಶ್ಲೇಷಣಾತ್ಮಕ ಬರಹಗಳೂ ಇಲ್ಲಿ ಸೇರಿವೆ. ಲಂಬಾಣಿ ಸಂಸ್ಕೃತಿ-ಭಾಷೆ ಕುರಿತ ಬರಹಗಳು ಗಮನ ಸೆಳೆಯುತ್ತವೆ. ಪ್ರತಿಯೊಂದು ಬರಹವು ಮನುಷ್ಯ-ಸಂಬಂಧಗಳ ಸೂಕ್ಷ್ಮತೆಗಳನ್ನು ಹಾಗೂ ಸ್ತ್ರೀ ಸಂವೇದನೆಯನ್ನು ಸಮರ್ಥಿಸಿಕೊಳ್ಳುತ್ತವೆ. ಇಲ್ಲಿ ಲೇಖಕಿ ಆಯ್ಕೆ ಮಾಡಿರುವ ಕೃತಿಗಳು ಹಾಗೂ  ಅಲ್ಲಿ ವಿಶ್ಲೇಷಣೆಗೆ ಆಯ್ದುಕೊಂಡು ವಿಷಯವಸ್ತುಗಳು, ಲೇಖಕಿ ಬಿ.ಟಿ. ಲಲಿತಾ ನಾಯಕ್ ಅವರ ವ್ಯಕ್ತಿತ್ವದ ಒಲವು-ನಿಲುವುಗಳ ಸೂಚಕ ಎನ್ನುವಂತೆ ಈ ಬರಹಗಳಿವೆ.   

About the Author

ಬಿ.ಟಿ. ಲಲಿತಾ ನಾಯಕ್
(04 April 1945)

ಬಿ.ಟಿ. ಲಲಿತಾ ನಾಯಕ್  ಜನಿಸಿದ್ದು 1945 ಏಪ್ರಿಲ್‌ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ.   ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ...

READ MORE

Related Books