
ಪ್ರಜಾರಾಜ್ಯ ಹಾಗು ರೈತ ಪತ್ರಿಕೆಯಲ್ಲಿ ದುಡಿದ ಬಳಿಕ, ಧಾರವಾಡದಲ್ಲಿ ಎಮ್.ಎ. ಪದವಿ ಪಡೆದು, ನಂತರ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಂಯೋಜಕರಾಗಿ ಕೆಲಸ ನಿರ್ವಹಿಸಿದ ಎಚ್.ವಿ.ನಾಗೇಶ್ ರವರು ಈ ಕೃತಿಯಲ್ಲಿ ಗ್ರಾಮಗಳ ಒಟ್ಟು ಸ್ವರೂಪವನ್ನು ಓದುಗರ ಮುಂದೆ ಇಟ್ಟಿದ್ದಾರೆ. ಆಧುನಿಕ ಕಾಲಗಟ್ಟದಲ್ಲಿ ಗ್ರಾಮಾಂತರ ಬದುಕಿನ ಜನರ ಜೀವನದ ಬಗ್ಗೆ, ಅವರ ಸಂಸ್ಕ್ರತಿ, ಸಂಪ್ರದಾಯ, ಜಗತ್ತಿನ ನಾನ ಕಡೆಗಳಲ್ಲಿ ಅವರು ಪಸರಿಸಿದ ರೀತಿಯ ಬಗ್ಗೆ ಮಾಹಿತಿಯನ್ನುಒದಗಿಸಿದ್ದಾರೆ. ಆಧುನಿಕತೆ ಎಂಬ ಮಾಯ ಕುದುರೆಯು ನಾಗಲೋಟವಾಗಿ ಓಡುತ್ತಿರುವ ತಾಂತ್ರಿಕ, ಮಾಂತ್ರಿಕ, ಯಾಂತ್ರಿಕ ಜಗತ್ತಿನಲ್ಲಿ ಗ್ರಾಮಾಂತರ ಬದುಕಿನ ಸೊಗಡಿನ ಪರಿಯನ್ನುಸ್ಪಟಿಕ ಸ್ಪಷ್ಟವಾಗಿ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
©2025 Book Brahma Private Limited.