ಗ್ರಾಮೀಣ ಬೇಟೆಗಳು

Author : ದೇವೇಂದ್ರಕುಮಾರ ಹಕಾರಿ

Pages 174

₹ 45.00




Year of Publication: 2000
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವ ಗ್ರಾಮೀಣ ಜನರ ಸಂಸ್ಕ್ರತಿಯ ಬಗ್ಗೆ ಈ ಕೃತಿ ತಿಳಿಸಿಕೊಡುತ್ತದೆ. ಓದುಗರಿಗೆ ಕ್ರಿಯಾಶೀಲತೆಯನ್ನು,ಕುತೂಹಲತೆಯನ್ನು , ಚಿಂತನಶೀಲತೆಯನ್ನು ಉಂಟುಮಾಡುತ್ತದೆ. ಗ್ರಾಮೀಣ ಬದಕಿನ ಬೇಟೆಗಳು ಎಂಬ ಕೃತಿಯೇ ತುಂಬಾ ರೋಚಕತೆಯನ್ನು ಉಂಟುಮಾಡುತ್ತದೆ. ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ ಇಲ್ಲಿ ಹಲವು ಲೇಖನಗಳನ್ನು ಕ್ರೋಢಿಕರಿಸಿದ್ದಾರೆ. ನಮ್ಮಿಂದ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಸೊಬಗನ್ನು ನಮಗೆ ಜ್ಞಾಪಿಸೂದರೊಂದಿಗೆ ಅವ‌ನ್ನು ಓದುಗರಿಗೆ ಅರ್ಥವಾಗುವ ಶೈಲಿಯಲ್ಲಿ ಅರ್ಥಮಾಡಿಸುತ್ತಾರೆ.

About the Author

ದೇವೇಂದ್ರಕುಮಾರ ಹಕಾರಿ
(14 April 1931 - 07 April 2007)

ಸಾಹಿತಿ ದೇವೇಂದ್ರಕುಮಾರ್‌ ಹಕಾರಿ ಅವರು ಜನಿಸಿದ್ದು 1931 ಏಪ್ರಿಲ್‌ 14ರಂದು. ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪ ಗ್ರಾಮ ಇವರ ಹುಟ್ಟೂರು. ತಾಯಿ ಮಲ್ಲವ್ವ, ತಂದೆ ಸಿದ್ದಪ್ಪ. ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಜಾನಪದ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದರು.  ಕಲಬುರ್ಗಿಯ ಶರಣ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ನಂತರ ಧಾರವಾಡದ ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಕೂಗುತಿವೆ ಕಲ್ಲು, ...

READ MORE

Related Books