ಗ್ರೇಟ್ ಗ್ಯಾಟ್ಸ್‌ಬಿ

Author : ಪ್ರಮೋದ ಮುತಾಲಿಕ

Pages 120

₹ 60.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560178
Phone: 202 - 23183311, 23183312

Synopsys

ಸ್ಕಾಟ್ ಫಿಜರಾಲ್ಡ್‌ರವರು ಅಮೆರಿಕದ ಪ್ರಮುಖ ಸಾಹಿತಿ ಅವರ ಪ್ರಸಿದ್ದ ಪುಸ್ತಕ ಗ್ರೇಟ್ ಗ್ಯಾಟ್ಸ್‌ಬಿ 1925ರಲ್ಲಿ ಪ್ರಕಟವಾಗಿದೆ.ಇದೇ ಹೆಸರಿನಲ್ಲಿ 5 ಚಲನಚಿತ್ರಗಳೂ ಬಂದಿವೆ. ಈ ಜನಪ್ರಿಯ, ಸಾರ್ವಕಾಲಿಕ ಕೃತಿಯನ್ನು ಪ್ರಮೋದ ಮುತಾಲಿಕ ಅವರು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.ಗ್ಯಾಟ್ಸ್‌ಬಿ ಬಂಗಲೆಯಲ್ಲಿ ಪ್ರತಿ ವಾರವೂ ಪಾರ್ಟಿಗಳು. ಅವನಿಗೆ ಗೊತ್ತಿದ್ದವರು, ಗೊತ್ತಿಲ್ಲದವರು ಎಲ್ಲರೂ ಹೋಗುತ್ತಿದ್ದರು.ಆತನದು ಅಪರೂಪದ ಮುಗುಳ್ನಗೆ.ತನ್ನ 5 ವರ್ಷಗಳ ಹಿಂದಿನ ಡೈಸಿ ಎನ್ನುವ ಪ್ರೀತಿಯನ್ನು ಹುಡುಕುತ್ತಿದ್ದ. ಅಂದು ಹಣವಿಲ್ಲದ ಕಾರಣಕ್ಕೆ ಪ್ರೇಮವನ್ನು ಕಳೆದುಕೊಂಡಿದ್ದ. ಇಂದು ಹಣವಿದ್ದರೂ ಅವಳಿಲ್ಲ.ಯಾರಿಗೂ ಅರ್ಥವಾಗದ ಗ್ಯಾಟ್ಸ್‌ಬಿ ಒಂದು ನಿಗೂಡ ವ್ಯಕ್ತತ್ವ.

About the Author

ಪ್ರಮೋದ ಮುತಾಲಿಕ

ಲೇಖಕ, ಅನುವಾದಕ ಪ್ರಮೋದ ಮುತಾಲಿಕ ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಬೆಂಗಳೂರಿನ  ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ 37 ವರ್ಷ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಇವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲೀಷಗೆ ಅನುವಾದಿಸಿದ್ದಾರೆ. ಚಿನುವ ಅಚಿಬೆ ಯ Things Fall Apart, ಆರ್. ಕೆ. ನಾರಾಯಣರ The Guide, ಸ್ಕಾಟ್ ಫಿಜರಾಲ್ಡ್ ರ Great Gatsby ಕಾದಂಬರಿಗಳನ್ನು ಕನ್ನಡಕ್ಕೆ ...

READ MORE

Related Books