ಗೂಢಚರ್ಯೆಯ ಆ ದಿನಗಳು

Author : ಡಿ.ವಿ. ಗುರುಪ್ರಸಾದ್

Pages 236

₹ 175.00




Year of Publication: 2019
Address: ನಂ.14, 27ನೇ ಅಡ್ಡರಸ್ತೆ, 4ನೇ ಬ್ಲಾಕ್‌, ಜಯನಗರ, ಬೆಂಗಳೂರು-560011
Phone: 8049066700

Synopsys

ವೃತ್ತಿಯಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಲೇಖಕರಾದ ಡಿ.ವಿ. ಗುರುಪ್ರಸಾದ್‌ ಅವರು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಾ, ಕೆಲಕಾಲ ಮೂವರು ಮಾಜಿ ಮುಖ್ಯಮಂತ್ರಿಗಳ ಕಣ್ಣು ಕಿವಿಯಾಗಿ ಗುಪ್ತಚರದಳದಲ್ಲಿ ಕೆಲಸ ಮಾಡಿದ್ದಾರೆ. ಆ ಸಮಯದ ನೆನಪುಗಳು, ಕೆಲ ಘಟನೆಗಳನ್ನು ಗೂಢಚರ್ಯೆಯ ಆ ದಿನಗಳು ಕೃತಿಯಲ್ಲಿ ವಿವರಿಸಿದ್ದಾರೆ. ಲೇಖಕರು ತಮ್ಮ ನೆನಪಿನ ಪುಟಗಳಿಂದ ಮುದ್ರಿತ ಪುಟಗಳಿಗೆ ಇಳಿಸಿದ ಈ ಪುಸ್ತಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಗುಂಡೂರಾವ್, ಎಸ್ ಎಂ ಕೃಷ್ಣ ಮತ್ತು ಪ್ರಮುಖವಾಗಿ ಧರಂ ಸಿಂಗ್ ರವರ ಗುಪ್ತಚರ ಅಧಿಕಾರಿಯಾಗಿ ಅವರಿಗೆಲ್ಲಾ ರಾಜ್ಯದ ದೈನಂದಿನ ಚಟುವಟಿಕೆಗಳು ವರದಿ ಮಾಡುವುದು, ಅಲ್ಲಿಂದ ಕುಮಾರಸ್ವಾಮಿ-ದೇವೇಗೌಡ-ಯಡಿಯೂರಪ್ಪ ಕಾಲಾವಧಿಯ ರಾಜಕೀಯ ಬೆಳವಣಿಗೆಗಳು, ಆಗಿನವರ ವಿರೋಧಿ ಮತ್ತು ಸ್ವಪಕ್ಷದವರ ತಂತ್ರ, ಕುತಂತ್ರಗಳು, ತಮ್ಮ ಗುಪ್ತದಳದ ಮೂಲಗಳಿಂದ ಸಂಗ್ರಹಿಸಿದ ಪೂರ್ವ ಚುನಾವಣಾ ಸಮೀಕ್ಷೆಗಳು ಇವೆಲ್ಲಾ ಯಥಾವತ್ತಾಗಿ ವಿವರಿಸಿದ್ದಾರೆ.

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books