ಗುಡಿಗಂಟೆ ಮತ್ತು ಇತರ ಕಥೆಗಳು

Author : ಕೆ. ನಲ್ಲತಂಬಿ

Pages 250

₹ 180.00




Year of Publication: 2022
Published by: ಲಡಾಯಿ ಪ್ರಕಾಶನ
Address: #21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ತಮಿಳುನಾಡಿನ ಪ್ರಸಿದ್ಧ ಕಥೆಗಾರರಾದ ಟಿ. ಜಾನಕಿರಾಮನ್ ಅವರ ಗುಡಿಗಂಟೆ ಮತ್ತು ಇತರ ಕಥೆಗಳು ಎಂಬ ಹೆಸರಿನ ಈ ಕಥಾಸಂಕಲನನ್ನು ಕನ್ನಡ ತಮಿಳು ಭಾಷೆಗಳ ಸಾಂಸ್ಕೃತಿಕ ಕೊಂಡಿಯಾಗಿರುವ ಕೆ ನಲ್ಲತುಂಬಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.ಈ ಪುಸ್ತಕಕ್ಕೆ ಖ್ಯಾತ ಕತೆಗಾರ ಎಸ ದಿವಾಕರ್‍ ಬೆನ್ನುಡಿ ಬರೆದಿದ್ದು, ‘ಇಲ್ಲಿರುವ ಎಲ್ಲಾ ಕತೆಗಳಲ್ಲಿ ನಿಜವಾಗಿ ಉಸಿರಾಡುತ್ತಿರುವವರು ನಾವು ಜೀವನದಲ್ಲಿ ಸದಾ ಎದುರುಗೊಳ್ಳುವ, ಆದರೆ ಅಷ್ಟಾಗಿ ಗಮನಿಸದ ಸಾಮಾನ್ಯ ಮನುಷ್ಯರು. ಬಹುಮಟ್ಟಿಗೆ ಅಸಹಾಯಕರಾಗಿರುವ ಎಲ್ಲರೂ ರಾಗದ್ವೇಷಗಳಿಂದ ದೈನಂದಿನ ತಾಪತ್ರಯಗಳಿಂದ ಬಳಲುತ್ತಿದ್ದರೂ ತಮ್ಮ ಸಣ್ಣ ಸಣ್ಣ ಸಾಹಸಗಳಿಂದ ಬದುಕಿಗೊಂದು ಅರ್ಥವನ್ನು ಕಂಡುಕೊಳ್ಳಲು ಹೋಗುತ್ತಿರುವವರು ಎನ್ನುತ್ತಾರೆ. ಜೊತೆಗೆ, ಜಾನಕೀರಾಮನ್ ಇಂಥವರ ಜಗತ್ತನ್ನು ನಿರೂಪಿಸುವಾಗ ಇದರಲ್ಲಿ ಕೆಲವೊಮ್ಮೆ ಹಠಾತ್ತಾಗಿ ಕಾಣಿಸಿಕೊಳ್ಳುವ ಸದ್ಗುಣವನ್ನೂ ವೈಪರೀತ್ಯವನ್ನೂ ಅನಿರೀಕ್ಷಿತ ರೀತಿಯಲ್ಲಿ ಕಾಣಿಸುವ ,ಮೂಲಕ ಕತೆಗಳಿಗೆ ಹೊಸದೊಂದು ಆಯಾಮವನ್ನೇ ಕೊಟ್ಟುಬಿಡುತ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಈ ಕೃತಿ ತಮಿಳುನಾಡು ಸರ್ಕಾರದ ತಮಿಳು ಭಾಷಿಕ ಕ್ಲಾಸಿಕ್ ಕೃತಿಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಯೋಜನೆಯಂಗವಾಗಿ ಈ ಕೃತಿ ಪ್ರಕಟವಾಗಿದೆ.

About the Author

ಕೆ. ನಲ್ಲತಂಬಿ

ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಪ್ರಮುಖರು. ಮನೆ ಭಾಷೆ ತಮಿಳು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಅಸ್ತಿತ್ವ  ಕಂಡು ಕೊಂಡವರು. ಅವರ ಪೂರ್ಣ ಹೆಸರು ಕಾಳಿಮುತ್ತು ನಲ್ಲತಂಬಿ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿ, ತಮ್ಮ ಭಾಷಾಂತರ ಕುಶಲತೆಯಿಂದ ಕನ್ನಡ ಮತ್ತು ತಮಿಳು ಸಾಹಿತ್ಯಾಸಕ್ತರಿಗೆ ಎರಡೂ ಭಾಷೆಗಳ ಸೊಗಡನ್ನು ಉಣ್ಣಿಸುತ್ತಿದ್ದಾರೆ. ಅರ್ಧನಾರೀಶ್ವರ, ಹುಣಿಸೆಮರದ ಕಥೆ, ಹಳ್ಳ ಬಂತು ಹಳ್ಳ, ಯಾದ್ವಶೇಮ್, ಕಡುಗು ವಾಂಗಿ ವಂದವಳ್ (ಸಾಸಿವೆ ತಂದವಳು) ಅವರ ಅತ್ಯಂತ ಗಮನಾರ್ಹ ಅನುವಾದಿತ ಕೃತಿಗಳು. ‘ಕೋಶಿ’ಸ್‌ ಕವಿತೆಗಳು’ ಅವರ ಸ್ವತಂತ್ರ ಕವನ ಸಂಕಲನ. ...

READ MORE

Related Books