ಗುಲಬರ್ಗಾ ಜಿಲ್ಲೆಯ ಜೈನ ಪರಂಪರೆ

Author : ಡಿ.ಎನ್‌. ಅಕ್ಕಿ

Pages 42

₹ 20.00




Year of Publication: 2015
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ - 583 276, ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ.
Phone: 8394241337

Synopsys

”ಗುಲಬರ್ಗಾ ಜಿಲ್ಲೆಯ ಜೈನ ಪರಂಪರೆ’ ಕೃತಿಯ ಲೇಖಕರು ಡಿ.ಎನ್. ಅಕ್ಕಿ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ತಮ್ಮ ಮಂಟಪ ಮಾಲೆ ಸರಣಿಯಡಿ (ಸಂಖ್ಯೆ: 246) ಪ್ರಕಟಿಸಿದೆ. ಗುಲಬರ್ಗಾ ಜಿಲ್ಲೆಯ ಜೈನ ಶಾಸನಗಳು, ಬಸದಿಗಳು, ಜೈನ ಜನಪದ, ಜೈನ ಅಡುಗೆ, ಮದುವೆ-ಮುಂಜಿವಿ ಸೇರಿದಂತೆ ಜೈನ ಆಚಾರ-ವಿಚಾರಗಳು, ಜೈನ ವಿದ್ವಾಂಸರು, ಜೈನ ವಾಸ್ತುಶಿಲ್ಪ, ಉತ್ಸವ ಹೀಗೆ ಜೈನ ಧರ್ಮೀಯ ಮಾಹಿತಿ ಒಳಗೊಂಡ ಸಂಶೋಧನಾತ್ಮಕ ಲೇಖನಗಳು ಈ ಕೃತಿ ಒಳಗೊಂಡಿದೆ. ಇಡೀ ಗುಲಬರ್ಗಾ ಜಿಲ್ಲೆಯ ಜೈನ ಧರ್ಮ ಹಾಗೂ ಪರಂಪರೆಯ ಸ್ಥೂಲ ಚಿತ್ರಣ ನೀಡುತ್ತದೆ ಮಾತ್ರವಲ್ಲ; ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಮೂಲ ಆಕರಗ್ರಂಥವಾಗಿಯೂ ಮಾಹಿತಿ ನೀಡುತ್ತದೆ. 

About the Author

ಡಿ.ಎನ್‌. ಅಕ್ಕಿ
(03 October 1948)

ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು.  ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ.  ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...

READ MORE

Related Books