ಗುಲಾಬಿ ಟಾಕೀಸ್ (ಕಥೆಯಿಂದ ಕಥೆಗೆ)

Author : ಪಿ. ಚಂದ್ರಿಕಾ

Pages 136

₹ 85.00




Year of Publication: 2012
Published by: ಅಭಿನವ ಪ್ರಕಾಶನ
Address: # 17/18-2, ಮೊದಲನೇ ಮು ಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗೂರು-560 040
Phone: 9448804905

Synopsys

ಲೇಖಕಿ ಪಿ. ಚಂದ್ರಿಕಾ ಅವರು ಬೇರೆ ಬೇರೆ ಕಡೆ ಮುಕಟಿತ ಬರಹಗಳ ಸಂಪಾದಿತ ಕೃತಿ-ಗುಲಾಬಿ ಟಾಕೀಸ್. ಕಥೆಯಿಂದ ಕಥೆಗೆ ಎಂಬ ಉಪಶೀರ್ಷಿಕೆ ಹೊಂದಿದೆ. ಭಾರತೀಯ ಕನ್ನಡ ಭಾಷೆಯ ಹಾಗೂ ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಲನಚಿತ್ರವು ವೂದೇಹಿ ಅವರ ಸಣ್ಣ ಕಥೆಯನ್ನು ಆಧರಿಸಿದ ಸಿನಿಮಾ. 2008ರ ಜುಲೈ 14 ರಂದು ನವದೆಹಲಿಯಲ್ಲಿ ನಡೆದ ಓಸಿಯಾನ್‌ನ ಸಿನೆಫಾನ್ ಫೆಸ್ಟಿವಲ್ ಆಫ್ ಏಷ್ಯನ್ ಮತ್ತು ಅರಬ್ ಸಿನಿಮಾದಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು, ಭಾರತೀಯ ಸ್ಪರ್ಧೆ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ನಟಿ ಉಮಾರ್ಶರೀ ಅವರು ಅತ್ಯುತ್ತಮ ಅಭಿನಯಕ್ದಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದರು.

ಈ ಹಿನ್ನೆಲೆಯಲ್ಲಿ, ವಿವಿಧ ಮಾಧ್ಯಮಗಳಲ್ಲಿ ಬರೆದ ವಿವಿಧ ಲೇಖಕರ ಬರಹಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ ಇದು. ಗುಲಾಬಿ ಟಾಕೀಸ್ ಚಲನಚಿತ್ರದ ಕಥೆ,ಉಂಟು ಮಾಡುವ ಪರಿಣಾಮ, ಸಿನಿಮಾ ಹಾಗೂ ಬದುಕಿನೊಂದಿಗಿನ ನಂಟು, ಅಭಿನಯ, ಸಂಗೀತ-ಚಿತ್ರೀಕರಣ ಹೀಗೆ ಪ್ರತ್ಯೇಕ ಆಂಶಗಳಿಗೆ ಪ್ರಾಮುಖ್ಯತೆ ನೀಡಿ ಬರೆದ ವಿವಿಧ ಬರಹಗಳು ಒಳಗೊಂಡಿವೆ.   

About the Author

ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...

READ MORE

Related Books