ಗುಲಗಂಜಿ ಮಾದೇವಿ

Author : ಕುರುವ ಬಸವರಾಜ್

Pages 164

₹ 125.00




Year of Publication: 1981
Published by: ಪ್ರೇಮ ಪ್ರಕಾಶನ
Address: ಜೀನಹಳ್ಳಿ ಅಂಚೆ, ನ್ಯಾಮತಿ ಮಾರ್ಗ, ಹೊನ್ನಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ- 577223
Phone: 9886026085

Synopsys

‘ಗುಲಗಂಜಿ ಮಾದೇವಿ’ ಜಾನಪದ ತಜ್ಞ, ಲೇಖಕ ಕುರುವ ಬಸವರಾಜ್ ಅವರು ಸಂಪಾದಿತ ಜಾನಪದ ಕತೆಗಳ ಸಂಗ್ರಹ. ಈ ಕೃತಿಗೆ ಡಾ. ಅಂಬಳಿಕೆ ಹಿರಿಯಣ್ಣ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ.. ‘ಡಾ.ಕುರುವ ಬಸವರಾಜ್ ಅವರ ಗುಲಗಂಜಿ ಮಾದೇವಿ ಶಿವಮೊಗ್ಗ (ಈಗ ದಾವಣಗೆರೆ) ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಆಸುಪಾಸಿನಲ್ಲಿ ಸಂಗ್ರಹಿಸಿದ ಹದಿನಾಲ್ಕು ಜನಪದ ಕಥೆಗಳ ಸಂಕಲನ. ಈಗಾಗಲೇ ಪ್ರಕಟಗೊಂಡಿರುವ ಕಥೆಗಳ ಭಿನ್ನರೂಪಗಳೇ ಅಲ್ಲದೇ ಒಂದೆರಡು ಹೊಸ ಮಾದರಿಗಳೂ ಇಲ್ಲಿವೆ’ ಎಂದಿದ್ದಾರೆ. ಇಲ್ಲಿನ ಅತಿಮಾನುಷ ಮತ್ತು ಕಿನ್ನರ ಕಥೆಗಳು ವಿವಿಧ ಆಶಯಗಳ ಸೇರ್ಪಡೆಯಿಂದ ಅತೀ ದೀರ್ಘವಾಗಿ ಬೆಳೆದಿರುವುದು ಗಮನಿಸತಕ್ಕ ಅಂಶ. ಒಟ್ಟಾರೆ ಒಂದು ಪ್ರದೇಶದಲ್ಲಿ ಪ್ರಚಲಿತವಿರುವ ಕಥನ ಮಾದರಿಗಳನ್ನು ತಿಳಿಸುವುದಕ್ಕೆ ಈ ಕೃತಿ ಉಪಯುಕ್ತವಾಗಿದೆ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books