ಗುಲ್ಬರ್ಗಾ ಜಿಲ್ಲೆಯ ಪ್ರವಾಸ ತಾಣಗಳು

Author : ಬಸವರಾಜ ಅಣ್ಣಪ್ಪ

Pages 340

₹ 360.00




Year of Publication: 2020
Published by: ಅವಿರತ ಪ್ರಕಾಶನ
Address: #1, 13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9449935103

Synopsys

ಲೇಖಕ ಡಾ. ಬಸವರಾಜ ಅಣ್ಣಪ್ಪ ಅವರ ಸಂಶೋಧನಾ ಮಹಾಪ್ರಬಂಧದ ಕೃತಿ-ಗುಲ್ಬರ್ಗಾ ಜಿಲ್ಲೆಯ ಪ್ರವಾಸಿ ತಾಣಗಳು. ನೈಸರ್ಗಿಕ, ಆರೋಗ್ಯ, ಭೌಗೋಳಿಕ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳ ನೆಲೆಯಾದ ವಿಭಜಿತ ಗುಲ್ಬರ್ಗಾ ಜಿಲ್ಲೆ (7 ತಾಲೂಕುಗಳು) ಕರ್ನಾಟಕದ ಯಾವುದೇ ಪ್ರವಾಸಿ ಜಿಲ್ಲೆಗಿಂತ ಕಡಿಮೆ ಏನಿಲ್ಲ. ಐತಿಹಾಸಿಕವಾಗಿಯೂ ಶ್ರೀಮಂತವಾಗಿದೆ. ನಿರ್ಲಕ್ಷಿತ ಪ್ರವಾಸಿ ತಾಣಗಳತ್ತ ಗಮನ, ಸೌಲಭ್ಯಗಳ ಕೊರತೆ ಹಾಗೂ ಅವುಗಳ ಸಂರಕ್ಷಣೆಯ ಅಗತ್ಯ, ತಾಣಗಳ ಅಭಿವೃದ್ಧಿಗಾಗಿ ಯೋಜನೆಗಳ ಅವಶ್ಯಕತೆಯನ್ನು ತಿಳಿಯುವುದು ಸಂಶೋಧನೆಯ ಉದ್ದೇಶವಾಗಿದೆ.

ಗುಲಬರ್ಗಾ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಮಹತ್ವ, ಭೌಗೋಳಿಕ ಹಾಗೂ ಐತಿಹಾಸಿಕ ಮಹತ್ವದ ಸಂಶೋಧನೆ, ಪ್ರವಾಸೋದ್ಯಮದ ಸಾಧ್ಯತೆಗಳು, ರಾಜ್ಯದ ಇತರೆ ಪ್ರವಾಸಿ ತಾಣಗಳಿಗಿಂತ ಜಿಲ್ಲೆಯ ಕ್ಷೇತ್ರಗಳ ಭಿನ್ನತೆ ಹಾಗೂ ವೈಶಿಷ್ಟ್ಯ, ಇತ್ಯಾದಿ ಅಂಶಗಳತ್ತ ಈ ಮಹಾಪ್ರಬಂಧವು ಬೆಳಕು ಚೆಲ್ಲುತ್ತದೆ ಮಾತ್ರವಲ್ಲ;ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆಗಳು ಹಾಗೂ ಆ ಮೂಲಕ ಭಾಗದ ಆರ್ಥಿಕ ಅಭಿವೃದ್ಧಿಗಳನ್ನು ಒಳಗೊಂಡಿದೆ.

About the Author

ಬಸವರಾಜ ಅಣ್ಣಪ್ಪ
(01 November 1980)

ಡಾ. ಬಸವರಾಜ ಅಣ್ಣಪ್ಪ ಅವರು ಗುಲಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಡಹಳ್ಳಿ ಗ್ರಾಮದವರು. ಎಂ.ಎ, ಎ.ಎಡ್, ಎಂ.ಫಿಲ್ ಹಾಗೂ ಪಿಎಚ್ ಡಿ (ವಿಷಯ: ಗುಲಬರ್ಗಾ ಜಿಲ್ಲೆಯ ಪ್ರವಾಸಿ ತಾಣಗಳು) ಪದವೀಧರರು. ಸುಲೇಪೇಟೆಯ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ತಮ್ಮ ಸಂಶೋಧನಾ ಮಹಾಪ್ರಬಂಧವನ್ನು(ವಿಷಯ: ಗುಲಬರ್ಗಾ ಜಿಲ್ಲೆಯ ಪ್ರವಾಸಿ ತಾಣಗಳು) ಪ್ರಕಟಿಸಿದ್ದಾರೆ. ...

READ MORE

Related Books