
ಬಾಹುಬಲಿ ಮಹಾರಾಯ ಜಯ ಕುರಿತು ಡಾ. ಚಂದ್ರಶೇಖರ ಕಂಬಾರರು ಬರೆದ ನಾಟಕ -ಗುಳ್ಳಕಾಯಜ್ಜಿ. ಬಾಹುಬಲಿಯಯೊಂದಿಗೆ ಭರತನ ಸಂಬಂಧದ ಬಗೆ, ಬಾಹುಬಲಿಯ ತ್ಯಾಗಮಯವಾದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ ವಸ್ತುವಿನ ನಾಟಕವಿದು. ಚಾವುಂಡರಾಯನು ಸಂಗ್ರಹಿಸಿಟ್ಟ ಹಾಲಿನ ಪ್ರಮಾಣವು ಗೊಮ್ಮಟೇಶ ಮೂರ್ತಿಗೆ ಅಭಿಷೇಕ ನಡೆಸಲು ಸಾಕಾಗದು. ಆದರೆ, ಗುಳ್ಳಕಾಯ ಎಂಬ ಒಂದು ಅಜ್ಜಿ ಗುಳ್ಳೆಯಂತಹ ಒಂದು ಸಣ್ಣ ಕೊಡದಲ್ಲಿ ಹಾಲು ಸಂಗ್ರಹಿಸಿದ್ದು, ಅದನ್ನು ಎರೆದರೆ ಇಡೀ ಗೊಮ್ಮಟನ ಮೂರ್ತಿಯನ್ನು ನೆನೆಯಿತು ಎಂಬುದು ಈ ನಾಟಕದ ವಸ್ತು.
©2025 Book Brahma Private Limited.