ಗುರುಕುಲ ದರ್ಶನ

Author : ಕಲ್ಯಾಣರಾವ ಜಿ. ಪಾಟೀಲ

Pages 78

₹ 50.00




Year of Publication: 2004
Published by: ಹಿರೇಮಠ ಸಂಸ್ಥಾನ ವಿದ್ಯಾಪೀಠದ ದಶಮಾನೋತ್ಸವ ಸಮಿತಿ
Address: # ಹಿರೇಮಠ ಸಂಸ್ಥಾನ, ಭಾಲ್ಕಿ, ಬೀದರ ಜಿಲ್ಲೆ

Synopsys

ಬೀದರ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನದ ವಿದ್ಯಾಪೀಠ ಸಂಸ್ಥೆಯು ದಶಮಾನೋತ್ಸವ ಅಂಗವಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ -ಗುರುಕುಲ ದರ್ಶನ. ಸಂಪಾದಕರು : ಕಲ್ಯಾಣರಾವ ಜಿ. ಪಾಟೀಲ, ಸಹ ಸಂಪಾದಕರು : ಡಾ. ಬಸವರಾಜ ಬಲ್ಲೂರ, ಸಂಜೀವಕುಮಾರ ಜುಮ್ಮಾ ಹಾಗೂ ಮೋಹನರೆಡ್ಡಿ

ಮಠಗಳೆಂದರೆ ಧರ್ಮ ಪ್ರಸಾರದ ಕೇಂದ್ರಗಳೆಂಬ ಸ್ಥಾಪಿತ ನಂಬಿಕೆಗೆ ಹೊರತಾಗಿ, ಮಠ ಎಂಬುದು ಜನ ಸಾಮಾನ್ಯರೊಂದಿಗೆ ಬೆರೆತು, ಬಡವರ, ದೀನ ದಲಿತರ, ಮಹಿಳೆಯರ, ನಿರಾಶ್ರಿತರ, ಅನಾಥರ, ದಮನಿತರ ನೋವಿಗೆ ಓಗೊಡುವ, ಮಾನವೀಯ ಅಂತಃಕರಣದಿಂದ ಅವರ ಸಂಕಟಗಳಿಗೆ ಸ್ಪಂದಿಸಿ ಅವರ ಜೀವಿತಕ್ಕೆ ಅನ್ನ, ಅರಿವೆ, ಅರಿವು, ಆಸರೆ ನೀಡುತ್ತಿರುವ ಅಪೂರ್ವ ಮಠ ಅದು ಭಾಲ್ಕಿಯ ಹಿರೇಮಠ ಸಂಸ್ಥಾನ ಮಠ. ಈ ಮಠದ ಒಂದು ಅಂಗ ಸಂಸ್ಥೆ, ವಿದ್ಯಾಪೀಠ. ಬೀದರ ಜಿಲ್ಲೆಯಾದ್ಯಂತ 30ಕ್ಕೂ ಅಧಿಕ ಶಾಲಾ ಕಾಲೇಜುಗಳಿವೆ. ಅವೆಲ್ಲವುಗಳ ಶೈಕ್ಷಣಿಕ ಸಾಂಸ್ಕೃತಿಕ ಸಾಧನೆಯ ಪಥದಲ್ಲಿ ಸಾಗಿ ಹತ್ತು ವರ್ಷ ಪೂರೈಸಿದ ಪ್ರಯುಕ್ತ ಹಿರೇಮಠ ಸಂಸ್ಥಾನದ ಸದಾಶಯದಂತೆ ಗುರುಕುಲದರ್ಶನ ಶೀರ್ಷಿಕೆಯಲ್ಲಿ ಸ್ಮರಣ ಸಂಚಿಕೆ ಸಿದ್ಧಪಡಿಸಲಾಗಿದೆ.

ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಶ್ರೀ ಸಿದ್ಧಗಂಗಾಮಠ, ತುಮಕೂರು; ಪೂಜ್ಯಶ್ರೀ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ಶ್ರೀ ತೋಂಟದಾರ್ಯಮಠ ಡಂಬಳ, ಗದಗ; ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಜಗದ್ಗುರು ಶ್ರೀ ವೀರಸಿಂಹಾಸನ ಮಠ, ಸುತ್ತೂರು ಶ್ರೀಕ್ಷೇತ್ರ ಮೈಸೂರು ಹಾಗೂ ಇತರೆ ಗಣ್ಯರ ಸಂದೇಶಗಳಿವೆ. ಮಾತೆಂಬುದು ಜ್ಯೋತಿರ್ಲಿಂಗ ಎಂಬ ಮೊದಲನೆಯ ಭಾಗದಲ್ಲಿ ವಿದ್ಯಾಪೀಠ ಸಂಸ್ಥೆಯ ವಿವಿಧ ಆಯಾಮಗಳನ್ನು ಸಾದರ ಪಡಿಸುವ 26 ಲೇಖನಗಳಿವೆ. ಆನು ಒಲಿದಂತೆ ಎಂಬ ಎರಡನೆಯ ಭಾಗದಲ್ಲಿ ಸಂಸ್ಥೆಯ ಬಗೆಗಿನ ಅಭಿಮಾನದ ಐದು ಕವಿತೆಗಳಿವೆ. ನಡುವೆ ಎಂಟು ಪುಟಗಳ ಬಹುವರ್ಣ ಭಾವಚಿತ್ರಗಳಿವೆ. ಬೀದರ ಜಿಲ್ಲೆಯ ಗಡಿನಾಡಿನ ಪ್ರದೇಶದಲ್ಲಿ ನೆಲದ ಮರೆಯ ನಿಧಾನದಂತೆ, ಎಲೆ ಮರೆಯ ಕಾಯಿಯಂತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಮರ್ಪಿತ ಶಿಕ್ಷಣ ಸಂಸ್ಥೆಯೊಂದು ಹತ್ತುವರ್ಷಗಳಲ್ಲಿ ಮಾಡಿದ ಸಾಧನೆಯ ಸಂಪೂರ್ಣ ಚಿತ್ರಣ ಈ ಸಂಚಿಕೆಯಲ್ಲಿ ಸಾಕಾರಗೊಂಡಿದೆ.

ಹಿರೇಮಠ ಸಂಸ್ಥಾನದ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮತ್ತು ಉಳಿದ ಪದಾಧಿಕಾರಿಗಳು, ಅಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವೃಂದ ಮತ್ತು ಅಲ್ಲಿನ ಶಿಶುವಿಹಾರದಿಂದ ಹಿಡುದು ಪ್ರಾಧಮಿಕ, ಮಾಧ್ಯಮಿಕ, ಪ್ರೌಢ, ಬಾಲ ಕಾರ್ಮಿಕರ ವಸತಿ ಶಾಲೆ, ಕೈಗಾರಿಕಾ ತರಬೇತಿ ಸಂಸ್ಥೆ, ವಸತಿ ಶಾಲೆ, ಶಿಕ್ಷಕರ ತರಬೇತಿ ಕೇಂದ್ರ, ಪದವಿಪೂರ್ವ ಮಹಾವಿದ್ಯಾಲಯಗಳವರೆಗಿನ ಎಲ್ಲ ವಿದ್ಯಾಲಯಗಳಲ್ಲಿರುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಾಧನೆಯ ಪಥದ ಹೆಜ್ಜೆಗುರುತುಗಳನ್ನು ಸಂಚಿಕೆಯ ಉದ್ದಕ್ಕೂ ಅನಾವರಣಗೊಂಡಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books