ಎಚ್.ಎಂ. ಚನ್ನಯ್ಯ ಸಮಗ್ರ ಸಾಹಿತ್ಯ

Author : ನಂದೀಶ್ ಹಂಚೆ

Pages 448

₹ 400.00




Year of Publication: 2013
Published by: ಸಂವಹನ
Address: ನಂ.12/1ಎ, ಸಂಜೆ ಬಜಾರ್ ಹಿಂದೆ, ಶಿವರಾಂ ಪೇಟೆ, ಮೈಸೂರು- 570001

Synopsys

‘ಎಚ್.ಎಂ. ಚನ್ನಯ್ಯ ಸಮಗ್ರ ಸಾಹಿತ್ಯ’ ಈ ಕೃತಿಯನ್ನು ಲೇಖಕ ಡಾ. ನಂದೀಶ ಹಂಚೆ ಅವರು ಸಂಪಾದಿಸಿದ್ದಾರೆ. ಕನ್ನಡ ನವ್ಯ ಸಾಹಿತ್ಯ ಪಂಥದ ಪ್ರಮುಖ ಲೇಖಕರಲ್ಲಿ ಎಚ್.ಎಮ್. ಚನ್ನಯ್ಯನವರು ಒಬ್ಬರಾಗಿದ್ದರು. ಅಷ್ಟೇ ಅಲ್ಲ, ವಿಶಿಷ್ಟವಾಗಿದ್ದರು ಕೂಡ. ಈ ವಿಶಿಷ್ಟತೆ ಕೇವಲ ಔಪಚಾರಿಕವಾದುದಲ್ಲ. ಯಾಕೆಂದರೆ ನವ್ಯ ಸಾಹಿತ್ಯ ಪ್ರವೃತ್ತಿಯನ್ನು ಕುರಿತು ಎಚ್.ಎಂ. ಚನ್ನಯ್ಯನವರಿಗೆ ಆ ಪಂಥದ ಇನ್ನಿತರ ಪ್ರಮುಖ ಲೇಖಕರಿಗಿಂತ ಖಚಿತವಾದ ಮತ್ತು ಭಿನ್ನವಾದ ದೃಷ್ಟಿಕೋನವಿತ್ತು. ಈ ಮಾತುಗಳಿಗೆ ಅವರು ಸ್ವತಃ ಬರೆದ ನವ್ಯ ಕಾವ್ಯ ಪುನರಾವಲೋಕನ ಎಂಬ ಲೇಖನವೇ ಸಾಕ್ಷಿ. 

About the Author

ನಂದೀಶ್ ಹಂಚೆ
(10 February 1978)

ಲೇಖಕ ನಂದೀಶ ಹಂಚೆ ಅವರು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಎಂ.ಎ ಪೂರ್ಣಗೊಳಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ’ ವಿಷಯದಡಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದರು.  ಕೃತಿಗಳು: ಕೆಂಡದೊಳಗಿನ ಬೇರು(ವಿಮರ್ಶೆ), ದುಡಿ (ವಿಮರ್ಶೆ), ಅಲ್ಲಮ ಮತ್ತು ಅರಾಜಕತೆ (ವಿಮರ್ಶೆ), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ(ಮಹಾಪ್ರಬಂಧ), ಬಸವಣ್ಣ ಮತ್ತು(ಸಂಪಾದಿತ), ಎಚ್.ಎಂ. ಚನ್ನಯ್ಯ ಸಮಗ್ರ ಸಾಹಿತ್ಯ, ಬಸವಪ್ಪಶಾಸ್ತ್ರಿಗಳ ಸಮಗ್ರ ನಾಟಕ ಸಾಹಿತ್ಯ(ಸಂಪಾದಿತ), ಕುವೆಂಪು ಕಥೆಗಳ ಸಮೀಕ್ಷೆ ...

READ MORE

Related Books