ಎಚ್ಚೆಸ್ವಿ ಅವರ ಈವರೆಗಿನ ಏಕಾಂಕ ನಾಟಕಗಳು

Author : ಎಚ್. ಎಸ್. ವೆಂಕಟೇಶಮೂರ್ತಿ

Pages 269

₹ 120.00




Year of Publication: 2010
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: #9, ಗೋಕುಲಂ ಮೂರನೇ ಹಂತ, ಮೈಸೂರು- 570002

Synopsys

ಎಚ್ಚೆಸ್ವಿಯವರ ಏಕಾಂಕಗಳು ವಿದ್ಯಾರ್ಥಿ ರಂಗಭೂಮಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಚಿತವಾದ, ಶಾಲಾ ಕಾಲೇಜುಗಳಲ್ಲಿ ಮತ್ತೆ ಮತ್ತೆ ಪ್ರಯೋಗಗೊಳ್ಳುತ್ತಾ ವಿದ್ಯಾರ್ಥಿ ರಂಗಭೂಮಿಗೆ ಹೊಸ ಬಣ್ಣಗಾರಿಕೆ, ವರ್ಚಸ್ಸು, ಮತ್ತು ಗಾಂಭೀರ್ಯವನ್ನು ತಂದಿರುವ ಪ್ರಭಾವಶಾಲೀ ನಾಟಕಗಳು. ಹಿಂದೆ ಪ್ರಕಟವಾಗಿದ್ದ ಏಳು ಏಕಾಂಕಗಳೊಂದಿಗೆ ಹೊಸ ಅಪ್ರಕಟಿತ ನಾಟಕಗಳೂ ಈ ಏಕಾಂಕ ಸಂಪುಟದ ಮೂಲಕ ಬೆಳಕು ಕಾಣುತ್ತಾ ಇವೆ. ಆಧುನಿಕ ಸಮಾಜದ ಸ್ಥಿತ್ಯಂತರ ಮತ್ತು ಬಿಕ್ಕಟ್ಟಿನ ಸಂಘರ್ಷಗಳು ಇಲ್ಲಿ ನಾಟೀಕರಣಗೊಂಡಿವೆ. ಅಂತರಂಗದ ಆತಂಕ ಮತ್ತು ಆಕರ್ಷಣೆಗಳು ನಾಟಕ ರೂಪದಲ್ಲಿ ಪ್ರಕಟಗೊಳ್ಳುತ್ತವೆ ಎನ್ನುವುದೇ ಈ ಏಕಾಂಕಗಳ ವಿಶೇಷವಾಗಿದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books