
ಲೇಖಕ ಎ.ಆರ್. ಮಣಿಕಾಂತ ಅವರು ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಹಾಡು ಹುಟ್ಟಿದ ಸಮಯ ಶೀರ್ಷಿಕೆಯಡಿ ಅಂಕಣ ಬರೆಹಗಳನ್ನು ಬರೆಯುತ್ತಿದ್ದು, ಅವುಗಳ ಸಂಗ್ರಹ ಕೃತಿಯೇ ‘ಹಾಡು ಹುಟ್ಟಿದ ಸಮಯ. ಸಿನಿಮಾ, ಸಾಹಿತ್ಯ ವಲಯದ ಮಧುರ ಗೀತೆಗಳ ಹುಟ್ಟು ಹಾಗೂ ಅವು ಕಾಡುವ ಭಾವಗಳನ್ನು ಅನುಸರಿಸಿ ಬರೆದ ಲೇಖನಗಳಿವು. ಒಂದು ಹಾಡು ಹುಟ್ಟುವ ಸಮಯ, ಆ ಹುಟ್ಟಿಗೆ ಕಾರಣ ತದನಂತರ ಅದು ಸಾರ್ವಜನಿಕ ಸಲಯದಲ್ಲಿ ಬೀರಿದ ಪರಿಣಾಮ ಎಲ್ಲವುಗಳ ಬಗ್ಗೆ ತುಂಬಾ ಆಪ್ತವಾದ ಭಾಷೆಯಲ್ಲಿ ಬರೆದ ಕೃತಿ.
©2025 Book Brahma Private Limited.