ಹಾಡು ಮುಗಿಯುವುದಿಲ್ಲ

Author : ಎನ್.ಎಸ್. ಶ್ರೀಧರಮೂರ್ತಿ

Pages 104

₹ 95.00
Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

‘ಹಾಡು ಮುಗಿಯುವುದಿಲ್ಲ’ ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಚಿತ್ರಗೀತೆ ಮತ್ತು ಧಾರವಾಹಿ ಶೀರ್ಷಿಕೆ ಗೀತೆಗಳ ದಾಖಲಾತಿ ಮತ್ತು ಅಧ್ಯಯನದ ಸಂಕಲನ. ಈ ಕೃತಿಯನ್ನು ಪತ್ರಕರ್ತ, ಲೇಖಕ ಎನ್.ಎಸ್. ಶ್ರೀಧರ ಮೂರ್ತಿ ಸಂಪಾದಿಸಿದ್ದಾರೆ.

ತಮ್ಮ ಸಮೃದ್ಧವಾದ ಭಾವಗೀತೆಗಳಿಂದ ಸುಗಮ ಸಂಗೀತಕ್ಕೆ ವಿಶೇಷ ಚಾಲನೆ ನೀಡಿ, ಕಾವ್ಯವನ್ನು ಓದುಗರ ಮತ್ತು ಕೇಳುಗರ ಪ್ರೀತಿಯ ಸಂಗಾತಿಯನ್ನಾಗಿಸಿದ ಮುಖ್ಯ ಕವಿಗಳಲ್ಲಿ ಎಚ್ಚೆಸ್ವಿ ಒಬ್ಬರು. ಸಾಹಿತ್ಯವನ್ನು, ಓದುವ ಒಂದು ಸಂಗೀತ ಶೈಲಿಯಾಗಿ, ಸಂಗೀತದ ಮೂಲಕ ಸಾಹಿತ್ಯದ ಅರ್ಥೈಸುವಿಕೆಯಾಗಿ ಅವರು ಸುಗಮ ಸಂಗೀತವನ್ನು ಪರಿಗಣಿಸಿರುವುದು, ಗಾಯಕರಿಗೆ ಮಾರ್ಗದರ್ಶನದಂತಿದೆ. 

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರ ಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ಬ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ಅಧ್ಯಯನ' ಇವರ ಸಂಶೋಧನಾ ಕೃತಿ. ವಿವಿಧ ವಾಹಿನಿಗಳ ಮೂಲಕ, ಬಾನುಲಿ ನಿಲಯಗಳ ಮೂಲಕ ಚಿತ್ರಗೀತೆಗಳನ್ನು ಕುರಿತು ಹಲವು ಜನಪ್ರಿಯ ...

READ MORE

Related Books