ಹಾಸು ಹೊಕ್ಕು

Author : ರಹಮತ್ ತರೀಕೆರೆ

Pages 216

₹ 225.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 0802216 1900

Synopsys

‘ಹಾಸು ಹೊಕ್ಕು’ ಕೃತಿಯು ರಹಮತ್ ತರೀಕೆರೆ ಅವರ ಲೇಖನಗಳ ಸಂಕಲನವಾಗಿದೆ. ಇಲ್ಲಿಯ ಬರಹಗಳು ವಿವಿಧ ವರ್ಣಗಳ ಹೂಗಳನ್ನು ಹೂದಾನಿಗೆ ಜೋಡಿಸಿಟ್ಟಾಗ ಅಂದವಾದ ಹೂಗುಚ್ಛವೊಂದು ಕಣ್ಮನ ಸೆಳೆಯುವಂತಿವೆ.ನಮ್ಮ ದೇಶದ ವಿವಿಧ ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಏಕರೂಪೀ ಹಾಗೂ ಬಹುತ್ವರೂಪದ ಸಂಘರ್ಷವನ್ನೂ ಚಿತ್ರಿಸುವ ಲೇಖನಗಳಿದ್ದು, ಇವು ನಮ್ಮ ಇಂದಿನ ಸಂಸ್ಕೃತಿಯನ್ನು ಸಾಮಾಜಿಕ, ಚಾರಿತ್ರಿಕ, ರಾಜಕೀಯ, ಧಾರ್ಮಿಕ, ಭಾಷಿಕ ನೆಲೆಯಲ್ಲಿ ಪರಿಚಯಿಸುತ್ತವೆ. ಹಲವು ಆಯಾಮಗಳಲ್ಲಿ ಹರಡಿಕೊಂಡ, ಹಲವಾರು ಲೋಕಗ್ರಹಿಕೆಗಳನ್ನೊಳಗೊಂಡ ಈ ಲೇಖನಗಳೆಲ್ಲ ಆರೋಗ್ಯಕರ ಲಘು ಟೀಕೆಗಳನ್ನು ಹಾಗೂ ವ್ಯಕ್ತಿತ್ವ ದರ್ಶನಗಳನ್ನು ಒಳಗೊಂಡಿವೆ.

 

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Reviews

‘ಹಾಸು ಹೊಕ್ಕು ಹೆಣಿಗೆಯ ಕುಸುರಿ ಕೆಲಸ’ ಕೃತಿಯ ವಿಮರ್ಶೆ

 ನಾಡಿನ ಬಹುತ್ವದ ಬಗೆಗಿನ ಬಹುನೋಟಗಳನ್ನು ಡಾ. ರಹಮತ್ ತರೀಕೆರೆ ಅವರ 'ಹಾಸುಹೊಕ್ಕು' ಕೃತಿಯಲ್ಲಿ ಕಾಣಬಹುದು. ಸಂಸ್ಕೃತಿ, ಚರಿತ್ರೆ, ಭಾಷೆ ರಾಜಕಾರಣ, ಸಾಹಿತ್ಯ ಹೀಗೆ ಓದುಗರಿಗೆ ಅನುಕೂಲವಾಗುವಂತೆ ಇಲ್ಲಿರುವ ಲೇಖನಗಳನ್ನು ವಿಂಗಡಿಸಲಾಗಿದೆ. ಬೆನ್ನುಡಿಯಲ್ಲಿ ಕೃತಿಯ ಕುರಿತಂತೆ ಹೀಗೆ ಬರೆಯಲಾಗಿದೆ. “ವಿವಿಧ ವರ್ಣಗಳ ಹೂಗಳನ್ನು ಹೂದಾನಿಗೆ ಜೋಡಿಸಿಟ್ಟಾಗ ಅಂದವಾದ ಹೂಗುವೊಂದು ಕಣ್ಣನ ಸೆಳೆದಂತೆ ಇಲ್ಲಿಯ ಲೇಖನಗಳು ಹಲವು ವಿಷಯಗಳನ್ನು ಒಳಗೊಂಡ ಲೇಖನ ಗುಚ್ಛವೊಂದು ನಮ್ಮ ಓದಿಗೆ ನಿಲುಕುತ್ತದೆ. ವಿವಿಧ ರೀತಿಯ ಪರಿಮಳ ಸೂಸುವ ಹೂಗಳಂತೆ ನಮ್ಮ ದೇಶದ ವಿವಿಧ ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಏಕ ರೂಪಿ ಹಾಗೂ ಬಹುತ್ವ ರೂಪದ ಸಂಘರ್ಷವನ್ನು ಚಿತ್ರಿಸುವ ಲೇಖನಗಳಿವೆ. ಇವು ನಮ್ಮ ಇಂದಿನ ಸಂಸ್ಕೃತಿಯನ್ನು ಸಾಮಾಜಿಕ, ಚಾರಿತ್ರಿಕ, ರಾಜಕೀಯ, ಧಾರ್ಮಿಕ, ಭಾಷಿಕ ನೆಲೆಯಲ್ಲಿ ಪರಿಚಯಿಸುತ್ತವೆ. ಹಲವು ಆಯಾಮಗಳಲ್ಲಿ ಹರಡಿಕೊಂಡ ಈ ಲೇಖನಗಳಲ್ಲಿ ಆರೋಗ್ಯಕರ ಲಘು ಟೀಕೆಗಳೂ, ವ್ಯಕ್ತಿ ದರ್ಶನಗಳೂ ಇವೆ. ನೆಮ್ಮದಿಯ ತಾಣಗಳನ್ನರಸುತ್ತ, ವೈರುಧ್ಯಗಳನ್ನು ಹುಡುಕಿ ಕಾಣಿಸುತ್ತ ಸಂಚರಿಸುವ ಮನಷ್ಟೊಂದು ಶ್ರುತಿ ಮಿಡಿದಂತೆ ಲೇಖನಗಳುದಕ್ಕೂ ಕೇಳಿಸುತ್ತದೆ.

ಲೇಖಕರೇ ಹೇಳುವಂತೆ ಕಳೆದ ಐದಾರು ವರ್ಷಗಳಿಂದ ಬರೆದ ಚಿಂತನ ಬರಹಗಳವು. ಇವುಗಳಲ್ಲಿ ನಮ್ಮ ಕಾಲದ ವಿದ್ಯಮಾನಗಳಿಗೆ ಮಾಡಲಾದ ಮುಡಿತಗಳಿವೆ. ಭಾರತದ ಜನಸಮುದಾಯಗಳು ಸೃಷ್ಟಿಸಿದ ಅಪೂರ್ವ ಪರಂಪರೆಯ ದಾಖಲಾತಿಗಳಿವೆ. ನನ್ನಂಥವರ ತಲ್ಲಣ, ಅಸಹಾಯಕತೆಯ ನಿಟ್ಟರುಗಳಿವೆ. ಇಕ್ಕಟ್ಟುಗಳಲ್ಲೂ ಒಡಮೂಡುತ್ತಿರುವ ಭರವಸೆಯ ಕದಿರುಗಳಿವೆ’.
 ಸಂಸ್ಕೃತಿ ವಿಭಾಗದಲ್ಲಿ ಟಾಗೋರ್, ಇಕ್ವಾಲ್, ಸಂತುರುನಾಳರಂತಹ ದಾರ್ಶನಿಕರ ಬರಹಗಳನ್ನು, ಹಾಡುಗಳನ್ನು ಇಟ್ಟುಕೊಂಡು ನಮ್ಮ ವರ್ತಮಾನವನ್ನು ಭೂತ ಮತ್ತು ಭವಿಷ್ಯದ ಜೊತೆಗೆ ಜೋಡಿಸುವ ಕೆಲಸವನ್ನು ಲೇಖಕರು ಮಾಡುತ್ತಾರೆ. 'ತತ್ವ ಭಾಗದಲ್ಲಿ ಹೆಣ್ಣು ಗಂಡು, ಮನುಷ್ಯ ಸಂಬಂಧಗಳ ಕುರಿತ ಚರ್ಚೆಗಳಿವೆ. ಮನುಷ್ಯನೊಳಗಿನ ಭಾವ ಪ್ರಪಂಚದ ಬಿಡುಗಡೆಯ ಹಪಹಪಿಕೆಯಲ್ಲಿ ತೆರೆದುಕೊಳ್ಳುವ ಬರಹಗಳು ವೈವಿಧ್ಯತೆ ಮತ್ತು ಬಹುರೂಪಿ ಸಮಾಜದ ಮೂಲಕ ನಾಡಿನ ನಾಳೆಗಳ ಬಗ್ಗೆ ಕನಸುಗಳನ್ನು ಕಾಣುತ್ತಾರೆ. 'ಚರಿತ್ರೆ'ಯ ವಿಭಾಗದಲ್ಲಿ ಬಾನೆಲ್ಲಿನ ವಿದ್ವತ್ತು, ಕಲ್ಯಾಣದ ಕನಸು, ಪಂಡಿತನ ಸಾವು, ದಾರುಣ ಇತಿಹಾಸ ಇತ್ಯಾದಿ ಲೇಖನಗಳು ಚರಿತ್ರೆಯ ಮೂಲಕ ಭವಿಷ್ಯವನ್ನು ಕಟ್ಟುವ ಪ್ರಯತ್ನ ನಡೆಸುತ್ತದೆ. 'ಭಾಷೆ'ಗೆ ಸಂಬಂಧಿಸಿದ ವಿಭಾಗವು ಭಾಷೆಯ ಹಲವು ನೆಲೆಗಳನ್ನು ಅತ್ಯಂತ ಕುತೂಹಲಕರವಾಗಿ, ನವಿರಾಗಿ ಚರ್ಚಿಸುತ್ತದೆ. 'ರಾಜಕಾರಣ' ವಿಭಾಗದ ಭಾರತದ ರಾಜಕೀಯ ದುರಂತಗಳನ್ನು ಕಟ್ಟಿಕೊಡುತ್ತದೆ. ಆದರ್ಶವಾದಿಗಳ ಆರ್ತತೆಯ ಜೊತೆಗೆ ಹೇಗೆ ಭಾವನೆಗಳ ರಾಜಕಾರಣ ವಿಜೃಂಭಿಸುತ್ತಾ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎನ್ನುವುದನ್ನು ವಿವಿಧ ಲೇಖನಗಳಲ್ಲಿ ವಿವರಿಸಲಾಗಿದೆ.

 ಇಲ್ಲಿರುವ ಹಲವು ಲೇಖನಗಳು ವರ್ತಮಾನದ ಗಂಭೀರ ವಿಷಯಗಳನ್ನು ಚರ್ಚಿಸುತ್ತದೆಯಾದರೂ, ನೂರು ನಡಿಗೆಯ ಮೂಲಕ ಅದು ಲಲಿತವಾಗಿ ಮನಮುಟ್ಟುತ್ತವೆ. ಕೃತಿಯಲ್ಲಿ ಒಟ್ಟು 18 ಲೇಖನಗಳಿವೆ. ನವಕರ್ನಾಟಕ ಪ್ರಕಾಶನ ಕೃತಿಯನ್ನು ವಕಟಿಸಿದೆ. ಪುಟಗಳು 216, ಮುಖಬೆಲೆ 225 ರೂ, ಆಸಕ್ತರು 080-22161902 ದೂರವಾಣಿಯನ್ನು ಸಂಪರ್ಕಿಸಬಹುದು.

(ಕೃಪೆ : ವಾರ್ತಾಭಾರತಿ, ಬರಹ : ತಾರುಣ್ಯ)

Related Books