ಹಡಪದ ಮಾಸ್ತರ ಕಲಾತತ್ವ

Author : ಕೆ.ಎಸ್. ಶ್ರೀನಿವಾಸಮೂರ್ತಿ

Pages 132

₹ 400.00




Year of Publication: 2021
Published by: ಕೆ. ವಿ ಸುಬ್ಬಣ್ಣ ಆಪ್ತ ರಂಗಮಂದಿರ
Address: 151, 7 ನೇ ಕ್ರಾಸ್ , ಟೀಚರ್‍ಸ್ ಕಾಲೋನಿ, 1 ನೇ ಮಹಡಿ ಬೆಂಗಳೂರು 560111
Phone: 9343609394

Synopsys

ಲೇಖಕ ಕೆ.ಎಸ್. ಶ್ರೀನಿವಾಸ ಮೂರ್ತಿ ಹಾಗೂ ಬಿ. ಆರ್ ವಿಶ್ವನಾಥ್ ಅವರ ಸಂಪಾದಕತ್ವದ ಹಡಪದ ಮಾಸ್ತರ ಕಲಾತತ್ವ ಕೃತಿಯು ಮಾಸ್ತರ- ವಿದ್ಯಾರ್ಥಿಗಳು ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಾಗೂ ಅವರ ಕಲಾತತ್ವಗಳನ್ನು ಕುರಿತು ಬರೆದ ಕಿರುಹೊತ್ತಿಗೆಯಾಗಿದೆ. ಕೆಲವೊಂದು ಬರವಣಿಗೆಗಳು ಅವರ ನಡೆನುಡಿಗಳಿಗೆ ಸೇರಿದರೆ ಇನ್ನು ಕೆಲವು ಅವರ ಕಲಾತತ್ವಕ್ಕೆ ಅಂದರೆ ಈ ಪುಸ್ತಕದ ಸಂದರ್ಭದಲ್ಲಿ ಲೋಕಗ್ರಹಿಕೆಗೆ ಸೇರಿದೆ. ಈ ಸಣ್ಣ ಹೊತ್ತಗೆಯ ಚೌಕಟ್ಟು ಬಂಧಗಳಿಗೆ ಇವೆರಡೂ ಮುಖ್ಯ ಕಾರಣಗಳಾಗಿವೆ. ಒಂದು ಕಡೆ, ತಮ್ಮ ಒಲವು ನಿಲುವುಗಳಲ್ಲಿ ಅಪಾರ ಶ್ರದ್ಧೆ ಪ್ರಾಮಾಣಿಕತೆ, ಇನ್ನೊಂದು ಕಡೆ ಅಗಾಧ ಸ್ವಾಭಿಮಾನ ಆತ್ಮಗೌರವಗಳಿಂದ ಹಡಪದ ಮಾಸ್ತರ ನಡೆನುಡಿಗಳು ರೂಪ ತಾಳಿವೆ. ಅದು ಸರಳ ಸಹಜ ಬದುಕಿಗೂ ಉನ್ನತ ಆದರ್ಶಗಳಿಗೂ ನಡುವೆ ಇರಬಹುದಾದ ನಂಟಿನ ಹುಡುಕಾಟವೆಂದರೂ ಸರಿಯೇ. ಈ ಹಿನ್ನೆಲೆಯಲ್ಲಿ, ಮಾಸ್ತರು ತಮ್ಮ ಭಾವನೆ ವಿಚಾರಗಳನ್ನು ವಿದ್ಯಾರ್ಥಿಗಳ ಜೊತೆಯಾಗಲೀ ಸಾರ್ವಜನಿಕರೊಂದಿಗೇ ಆಗಲಿ ಕಳಕಳಿಯಿಂದ ಮುಕ್ತವಾಗಿ ಹಂಚಿಕೊಳ್ಳಲು ಇಷ್ಟಪಟ್ಟರು. ಆದರೆ, ಕಲೆಯೂ ಸೇರಿದಂತೆ ಬದುಕಿನ ಹಲವು ಆಯಾಮಗಳಿಗೆ ಒಟ್ಟೊಟ್ಟಿಗೆ ಸ್ಪಂದಿಸುವ ಅವರ ಮಾತಿನ ವೈಖರಿ ತೀರಾ ಸಂಕೀರ್ಣವಾದದ್ದು. ಆ ಮಾತುಗಳಲ್ಲಿ ಸ್ವವಿರೋಧಗಳು ಭಾಸವಾಗುತ್ತಿದ್ದುದು ಸಾಮಾನ್ಯ . ಹಾಗೆಯೇ ಅಜ್ಞಾನ ಅವಿವೇಕಗಳನ್ನು ಅವರು ತಿವಿದು ತೋರುವ ರೀತಿಯಲ್ಲಿ ಅನುಕಂಪದೊಂದಿಗೆ ತುಂಟತನಗಳು ಇದ್ದವು. ಮಾಸ್ತರ ನಿತ್ಯಬದುಕಿನಲ್ಲಿ ನೇರವಾಗಿ ಭಾಗಿಗಳಾಗಿದ್ದ ಕೆಲವು ವಿದ್ಯಾರ್ಥಿಗಳು, ತಮ್ಮ ಅನುಭವ, ಪತ್ರಿಕ್ರಿಯೆಗಳನ್ನು ಹಂಚಿಕೊಳ್ಳುವ ಪ್ರಯತ್ನವೊಂದು ಈ ಕಿರುಹೊತ್ತಗೆಯಲ್ಲಿ ಮಾಡಿದ್ದಾರೆ. ಮಾಸ್ತರ ಪಠ್ಯಕ್ರಮವೇ ಅಲ್ಲದೆ, ಅವರ ದಿನನಿತ್ಯದ ಬದುಕು ಈ ಕೆಲವು ವಿದ್ಯಾರ್ಥಿಗಳ ಜೀವನಕ್ರಮದಲ್ಲೇ ಹಾಸುಹೊಕ್ಕಾಗಿತ್ತೆಂಬುದು ಇಲ್ಲಿ ಗಮನಿಸಬೇಕಾದ ಸಂಗತಿ’ ಎಂದು ಅಭಿಪ್ರಾಯಪಡಲಾಗಿದೆ. 

About the Author

ಕೆ.ಎಸ್. ಶ್ರೀನಿವಾಸಮೂರ್ತಿ

ಕೆ. ಎಸ್. ಶ್ರೀನಿವಾಸ ಮೂರ್ತಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಅವರ ಕೆಲವು ಕವನಗಳು 'ಶೂದ್ರ', 'ಸಂಕ್ರಮಣ' ಮುಂತಾದ ಸಾಹಿತ್ಯಕ ಪತ್ರಿಕೆಗಳಲ್ಲಿ ಮತ್ತು “ಕ್ರಿಸ್ತಾಂಜಲಿ', 'ಅಂಕಣ ಕಾವ್ಯಾಂಕ', 'ಯುವಭಾರತಿ' 1973 ಮತ್ತು 1975, ಬೆಂಗಳೂರು ವಿಶ್ವವಿದ್ಯಾಲಯ) ಮುಂತಾದ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಕನ್ನಡದ ಕಲಾಸಾಹಿತ್ಯದ ದೃಷ್ಟಿಯಿಂದ ಅವರ ಕೆಲವು ಲೇಖನಗಳು ವಿಶೇಷವಾದ ಭರವಸೆಯನ್ನು ಹುಟ್ಟಿಸಿವೆ. ಶಾಬ್ಲಿಕ ಮಾಧ್ಯಮದಲ್ಲಿ ದೃಶ್ಯ ಮಾಧ್ಯಮ' (ಅಂಕಣ') 'ಪುಷ್ಪಮಾಲ ಅವರ ಕಲೆ' (ಶೂದ್ರ), (ರುಮಾಲೆ ಅವರ ಪ್ರಕೃತಿ ಚಿತ್ರಗಳು' (ಅಂಕಣ) ಮುಂತಾದ ಕೆಲವು ಲೇಖನಗಳ ಜೊತೆಗೆ ತರುಣ ...

READ MORE

Related Books