ಹಕ್ಕಿಗಳ ಸ್ವಾತಂತ್ಯ್ರೋತ್ಸವ

Author : ವಿಜಯಕಾಂತ ಪಾಟೀಲ

Pages 96

₹ 75.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905, 080-23505825

Synopsys

’ಹಕ್ಕಿಗಳ ಸ್ವಾತಂತ್ಯ್ರೋತ್ಸವ’ ಮಕ್ಕಳ ಕತೆಗಳನ್ನು ಮಲೆನಾಡಿನ ಹಿನ್ನೆಲೆಯಲ್ಲಿ ಹೇಳುವ ಯತ್ನ. ಮಕ್ಕಳಿಗೆ ಇಷ್ಟವಾಗುವಂತಹ ರೂಪಕಗಳ ಮೂಲಕ ಅವರು ಮಾತನಾಡಲು ಯತ್ನಿಸಿದ್ದಾರೆ. ಅದರಲ್ಲಿಯೂ ಪಾಟೀಲರು ವರ್ಣಿಸುವ ಪ್ರಾಣಿಪ್ರಪಂಚ ಅನನ್ಯವಾದುದು. 

ಹಿರಿಯ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಅವರು 'ಅಮ್ಮ ಅಂದ್ರೆ ಅಷ್ಟಿಷ್ಟಲ್ಲ' ಎನ್ನುವ ಪದ್ಯಗಳ ಸಂಕಲನವನ್ನ ತಂದಿರುವ ವಿಜಯಕಾಂತ ಪಾಟೀಲರು ಮಕ್ಕಳಿಗಾಗಿ ರಚಿಸಿದ ಕತೆಗಳ ಸಂಕಲನ. ಅವರ ಈ ಮೊದಲಿನ ಪದ್ಯಗಳ ಕಟ್ಟಿನ ಮುಂದುವರಿಕೆಯಾಗಿಯೇ ಈ ಕತೆಗಳ ಸಂಕಲನ ನನಗೆ ಕಂಡಿದೆ. ವಿಜಯಕಾಂತ ತಮ್ಮದೇ ದೇನಿಸುವಿಕೆಯಲ್ಲಿ ಮಕ್ಕಳ ಲೋಕವನ್ನು ಕಂಡರಿಸಿರುವಂತೆ ಕಾಣುತ್ತದೆ. ಇಲ್ಲಿಯವರೆಗಿನ ಕನ್ನಡದ ಬರವಣಿಗೆಯ ಹಿನ್ನಲೆಗಿಂತ ಅದು ಅವರದೇ ಆದ ಅಂದಾಜಿನ ಆಕಾರಗಳದ್ದು. ಸಾಮಾಜಿಕ ಚಿಂತನೆಯ ದಾರಿಯಲ್ಲಿ ಅವರ ಒಟ್ಟು ಬರವಣಿಗೆಯ ಇನ್ನೊಂದು ಮುಖವಾಗಿ ಇದು ಕಂಡಿದೆ ಎಂತಲೂ ಬಹು ಸುಲಭವಾಗಿ ಅಂದುಕೊಳ್ಳಬಹುದು. ಹಾಗೆ ಇದು ತಮ್ಮ ಮುಂದಿರುವ ಮಕ್ಕಳಿಗಾಗಿ ತಮ್ಮೊಳಗಿನ ಮಾತುಗಳನ್ನ ಚಿಂತನೆಗಳನ್ನ ಕತೆಗಳ ಮೂಲಕವಾಗಿ ತೆರೆದುಕೊಂಡಂತೆ ಸಾಗುತ್ತವೆ. ಇಲ್ಲಿನ ಕತೆಗಳ ಹಂದರಗಳು, ಹಾಗಾಗಿ ಮಕ್ಕಳಿಗಾಗಿ ಅವರು ಆಸೆಯಿಂದಲೇ ತೊಡಗಿಕೊಂಡಿದ್ದರೂ ಅವರಿಗಾಗಿ ತಾವೇನನ್ನೂ ನೀಡಲು ಉತ್ಸುಕರಾಗಿದ್ದಾರೆ. ಕತೆಯ ಹಂದರಗಳು ಅದಕ್ಕೆ ಅನುಕೂಲವಾಗುವಂತೆ ಕಟ್ಟಿಕೊಂಡವುಗಳು. ಅದೊಂದು ಪ್ರಾಣಿಗಳನ್ನ ಬಳಸಿಕೊಂಡ ಕತೆಯಾಗಬಹುದು. ನಮ್ಮ ಜನಪದರ ಕತೆಯ ಮಾದರಿಯಾಗಬಹುದು. ಹೇಗೂ ಸಾಧ್ಯಮಾಡಿಕೊಂಡಿರುವುದು ಆಗಬಹುದು. ಹೀಗೆ ಇಲ್ಲಿನ ಮಕ್ಕಳ ಕತೆಗಳೆಲ್ಲ ಉದೇಶಪೂರ್ವಕವಾಗಿ ವಿಜಯಕಾಂತ ಮಕ್ಕಳಿಗೆ ತಾವು ಹೇಳಬೇಕಾದುದನ್ನ ಅಥವಾ ಮಕ್ಕಳಿಗೆ ಮುಟ್ಟಿಸಬೇಕು ಅಂದುಕೊಂಡಿರುವುದನ್ನು ಸಾಧ್ಯ ಮಾಡಿಕೊಂಡಿರುವುದೇ ಆಗಿದೆ. ಅದೇ ಅವರಿಗೆ ಬೇಕಾಗಿದೆ. ಹಾಗಾಗಿ ಹಾಗೆ ಬರೆದಿದ್ದಾರೆ, ಹಾಗೇ ವಿಜಯಕಾಂತ್ ತಮಗನಸಿದುದನ್ನ ದಿಟ್ಟವಾಗಿ ಬರೆದಿದ್ದಾರೆ ಎಂದುಕೊಳ್ಳುತ್ತೇನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

 

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books