ಹಕ್ಕಿಗಳು

Author : ಸುಮತೀಂದ್ರ ನಾಡಿಗ

Pages 128

₹ 5.00




Year of Publication: 1980
Published by: ಜಗತ್ ಸಾಹಿತ್ಯ ಮಾಲೆ
Address: 10ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು- 3

Synopsys

‘ಹಕ್ಕಿಗಳು’ ಗ್ರೀಕ್ ದೇಶದ ಸುಪ್ರಸಿದ್ಧ ಹಾಸ್ಯಕವಿ, ನಾಟಕಕಾರ ಅರಿಸ್ಟೋಫೆನಿಸ್ ಅವರ ಕೆಲವು ನಾಟಕಗಳನ್ನು ಲೇಖಕ ಸುಮತೀಂದ್ರ ನಾಡಿಗ ಕನ್ನಡೀಕರಿಸಿದ್ದಾರೆ. ‘ಹಕ್ಕಿಗಳು ’ ನಾಟಕ, ವಿಜಯೋನ್ಮತ್ತರಾದ ಅಥೆನ್ಸ್ ನಗರದ ಜನ ತಮ್ಮ ಸೈನ್ಯದ ವಿಜಯ ಯಾತ್ರೆಯಿಂದ ಪವಾಡವನ್ನೆಲ್ಲ ನಿರೀಕ್ಷಿಸುತ್ತಿದ್ದರು, ಈ ಅವಾಸ್ತವಿಕ ನಿರೀಕ್ಷೆಗಳನ್ನು ಲೇಖಕ ಈ ನಾಟಕದಲ್ಲಿ ವಿಡಂಬನೆಗೆ ಒಳಪಡಿಸಿದ್ದಾನೆ. ಈ ನಾಟಕ ತನ್ನ ಅಸದೃಶ ವಿನೋದ ದೃಷ್ಟಿಗಾಗಿ. ಅಸಾಮಾನ್ಯ ಕಲ್ಪಕ ಶಕ್ತಿಗಾಗಿ ಹೆಸರುವಾಸಿಯಾಗಿದೆ. ಉಳಿದೆಲ್ಲಾ ನಾಟಕಗಳಿಗಿಂತ ಹೆಚ್ಚಾಗಿ ಇಲ್ಲಿ ನಿಜವಾದ ತಮಾಷೆಯ ಹೂಬಾಣಗಳಿವೆ. ಇಲ್ಲಿರುವ ಭಾವಗೀತೆಗಳು, ಗ್ರೀಕ್ ಭಾವಗೀತೆಗಳಲ್ಲಿ ಅತ್ಯುತ್ತಮವಾದುವುಗಳ ಸಾಲಿಗೆ ಸೇರುವಂತವು. ಈ ನಾಟಕವನ್ನು ತಿಳಿಯಲು ಅಥೆನ್ಸ್ ನ ಇತಿಹಾಸದ ವಿವರ ಅಭ್ಯಾಸದ ಅಗತ್ಯವಿಲ್ಲ. ಆದ್ದರಿಂದ, ಇದು ಆಧುನಿಕ ವಾಚಕರಿಗೆ ಸುಲಭ ಗ್ರಾಹ್ಯವಾಗುತ್ತದೆ

About the Author

ಸುಮತೀಂದ್ರ ನಾಡಿಗ
(04 May 1935 - 07 August 2018)

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಸುಮತೀಂದ್ರ ನಾಡಿಗರು ಜನಿಸಿದ್ದು 1935ರ ಮೇ 4ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ. ಸುಮತೀಂದ್ರ ನಾಡಿಗ ಕಥೆ, ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕೃತಿಗಳು: ಸ್ಥಿತಪ್ರಜ್ಞ, ಗಿಳಿ ಮತ್ತು ದುಂಬಿ, ಕಾರ್ಕೋಟಕ, ಆಯ್ದ ಕಥೆಗಳು (ಕಥಾ ಸಂಕಲನಗಳು), ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪುದೇವತೆ, ಉದ್ಘಾಟನೆ, ಭಾವಲೋಕ, ಇಂಪತ್ಯಗೀತೆ, ತಮಾಷೆ ಪದ್ಯಗಳು, ಕುಹೂಗೀತೆ, ನಟರಾಜ ಕಂಡ ಕಾಮನಬಿಲ್ಲು, ಸಮಗ್ರ ಕಾವ್ಯ, ಪಂಚಭೂತಗಳು, ಜಡ ಮತ್ತು ಚೇತನ (ಕವನ ಸಂಗ್ರಹಗಳು), ಅಡಿಗರ ಕಾವ್ಯ, ...

READ MORE

Related Books