ಹಲಗಲಿ: ಗ್ರಾಮ ಜಾನಪದ

Author : ಶ್ರೀರಾಮ ಇಟ್ಟಣ್ಣವರ

Pages 150

₹ 150.00




Year of Publication: 1995
Published by: ಲಿಂಗಾಯಿತ ಕೇಂದ್ರ ಸಂಶೋಧನಾ ಗ್ರಂಥಾಲಯ
Address: ನಾಗನೂರು ರುದ್ರಾಕ್ಷಿ ಮಠ, ಶಿವಬಸವನಗರ, ಬೆಳಗಾವಿ

Synopsys

ಲೇಖಕ ಡಾ ಶ್ರೀ ರಾಮ ಇಟ್ಟಣ್ಣವರ  ಅವರ ಕೃತಿ-ʼಹಲಗಲಿ; ಗ್ರಾಮ ಜನಪದ. ಮುಧೋಳ ತಾಲೂಕಿನ ಹಲಗಲಿ ಗ್ರಾಮವನ್ನು ಇಲ್ಲಿ ಜಾನಪದ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಊರಿನ ಭೌಗೋಳಿಕ ಪರಿಸರ, ಈ ಊರಿಗೆ ಸಂಬಂಧಪಡುವ ಪುರಾಣ, ಐತಿಹ್ಯ, ಇತಿಹಾಸದ ಅಂಶಗಳು, ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ಸಂಪ್ರದಾಯ, ಆಚರಣೆಗಳು, ಕಲೆ, ವೈದ್ಯ, ಕ್ರೀಡೆ ಹೀಗೆ ಈ ಗ್ರಾಮದ ಸಮಸ್ತ ವಿಷಯವನ್ನು ಇಲ್ಲಿಯ ಅಧ್ಯಯನ ಒಳಗೊಂಡಿದೆ. ಗ್ರಂಥದ ಕೊನೆಯಲ್ಲಿ ಹಲಗಲಿಗೆ ಸಂಬಂಧಪಡುವ ಹಾಡುಗಳನ್ನೂ, ಪೋಟೋಗಳನ್ನು ಸಂಗ್ರಹಿಸಲಾಗಿದೆ. ಹಳ್ಳಿಯ ಚರಿತ್ರೆಗೆ ಮಾದರಿಯಾಗಿರುವ ಚಾರಿತ್ರಿಕ ಪುಸ್ತಕವಾಗಿದೆ. ಹಲವು ಐತಿಹ್ಯಗಳನ್ನು ಹೊಂದಿದ್ದರೂ ಆಂಗ್ಲರ ವಿರುದ್ಧ ಹೋರಾಡಿದ ಬೇಡರ ಬಂಡಾಯದಿಂದಾಗಿ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ ಎನ್ನುವುದು ಈ ಕೃತಿಯ ಮೂಲ ಅಂಶವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯಗಳಾಗಿದ್ದ ಗ್ರಾಮಗಳು ಆಧುನಿಕ ಕಾಲದಲ್ಲಿ ಬದಲಾಗುತ್ತಿವೆ. ಪರಿಣಾಮವಾಗಿ ಪ್ರಾಚೀನ ಸಂಪ್ರದಾಯಗಳು, ಸಾಮಾಜಿಕ ಮತ್ತು ಧಾರ್ಮಿಕ ವಿವಿಧ ಆಚರಣೆಗಳು ಐತಿಹಾಸಿಕ ಅವಶೇಷಗಳು ಮಾಯವಾಗುತ್ತಿವೆ. ಹಿರಿಯರು ಪರಿಪಾಲಿಸಿಕೊಂಡು ಬಂದಿರುವ ಆಚರಣೆಗಳು, ಸಂಪ್ರದಾಯಗಳು ಮತ್ತು ಐತಿಹಾಸಿಕ ಘಟನೆಗಳು ಈ ಕೃತಿಯಲ್ಲಿ ಅಡಕವಾಗಿವೆ. ಸಂಶೋಧನ ಅಧ್ಯಯನದ ರೀತಿಯಲ್ಲಿ ರೂಪುಗೊಂಡ ಈ ಕೃತಿಯು ನಮ್ಮ ದೇಶದ ಸಾವಿರ ಸಾವಿರ ಹಳ್ಳಿಗಳ ಚರಿತ್ರೆಯ ಬರವಣಿಗೆಯ ಮಾದರಿಯಾಗಿದೆ

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books