ಹಲಸಂಗಿ ಗೆಳೆಯರು

Author : ಗುರುಲಿಂಗ ಕಾಪಸೆ

Pages 28

₹ 5.00




Year of Publication: 1998
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಕನ್ನಡ ನುಡಿಯ ನವೋದಯಕ್ಕೆ ಕಾರಣವಾದ ಊರು ಹಲಸಂಗಿಯಲ್ಲಿ ಸಾಹಿತ್ಯದ ಕೃಷಿಗೈದ ಐವರು ಹಲಸಂಗಿ ಗೆಳೆಯರ ಸಾಹಿತ್ಯಕ ಚಟುವಟಿಕೆಗಳ ಬಗ್ಗೆ ಈ ಕಿರುಕೃತಿಯಲ್ಲಿ ವಿವರಿಸಲಾಗಿದೆ. ಹಲಸಂಗಿ ಪ್ರದೇಶದಲ್ಲಿದ್ದ ಅನುಭಾವ ಕವಿ ಮಧುರಚೆನ್ನರು ತಾವು ಬರೆಯಲು ತೊಡಗಿದ್ದಲ್ಲದೆ, ತಮ್ಮ ಗೆಳೆಯರಾದ ಸಿಂಪಿಲಿಂಗಣ್ಣ, ಪಿ. ಧೂಲಾಸಾಹೇಬ ಹಾಗೂ ಕಿರಿಯರಾದ ಕಾಪಸೆ, ರೇವಪ್ಪ ನವರನ್ನು ಕೂಡಾ ಬರೆಸಿ ಕನ್ನಡನಾಡಿನಲ್ಲಿ ಸಾಹಿತ್ಯಕ ಸಾಂಸ್ಕೃತಿಕ ವಾತಾವರಣವನ್ನು ಬೆಳೆಸಿದ ಪರಿಯನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

About the Author

ಗುರುಲಿಂಗ ಕಾಪಸೆ
(02 April 1928)

ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (1998, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.  ಕೃತಿಗಳು: ಅಕ್ಕಮಹಾದೇವಿ, ಮಧುರಚೆನ್ನ, ಶ್ರೀ ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು, ಪ್ರವಾಸಕಥನ: ಶಾಲ್ಮಲೆಯಿಂದ ಗೋದಾವರಿಯವರೆಗೆ ಹಾಗೂ ಮಕ್ಕಳ ಸಾಹಿತ್ಯ: ಕವಿ ರವಿಂದ್ರರು, ಶಿ.ಶಿ.ಬಸವನಾಳ ಮತ್ತು ವಿಮರ್ಶೆ: ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ. ಸಂಪಾದಿತ ಕೃತಿಗಳು: ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ...

READ MORE

Related Books