ಹಾಲುಮತ ಸನಾತನ ಧರ್ಮ

Author : ಚಂದ್ರಕಾಂತ ಬಿಜ್ಜರಗಿ

Pages 408

₹ 350.00




Year of Publication: 2013
Published by: ಶೈಲಚಂದ್ರ ಪ್ರಕಾಶನ
Address: ದರ್ಗಾ, ಸೆಂಟ್ರಲ್‌ ಜೈಲ್ ಹತ್ತಿರ, ವಿಜಯಪುರ 586103
Phone: 9448336151

Synopsys

ಕೇವಲ ಹಿಂದೂ ಧರ್ಮ ಸನಾತನ ಎಂದು ಹೇಳುವುದು ಸರಿಯಲ್ಲ ಎನ್ನುವ ಲೇಖಕರು ಪ್ರಪಂಚದಲ್ಲಿ 4200 ಅಧಿಕ ಧರ್ಮ-ಮತಗಳಿವೆ, ಅವುಗಳಲ್ಲಿ ಇಂದು ಹೆಚ್ಚು ಪ್ರಚಾರದಲ್ಲಿರುವುದು 23 ಧರ್ಮಗಳು ಎನ್ನುತ್ತಾರೆ. ಕೆಲವು ಸಣ್ಣ-ಪುಟ್ಟ ಧರ್ಮಗಳ ಹುಟ್ಟು ಬೆಳವಣಿಗೆ, ತತ್ವ-ಸಿದ್ಧಾಂತ ಮತ್ತು ಆಚರಣಾ ನಿಯಮಗಳ ಕುರಿತು ಮಾಹಿತಿ ನೀಡಲಾಗಿದೆ. ಎಲ್ಲ ಧರ್ಮಗಳಿಗೆ ಮೂಲವಾಗಿರುವ ಸುಮೇರು, ಬ್ಯಾಬಿಲೋನ್, ಅಸ್ಸೀರಿಯಾ, ಇಜಿಪ್ತ, ಗ್ರೀಸ್, ಪರ್ಶಿಯಾ, ಹರಪ್ಪ-ಮಹೆಂಜೀ-ದಾರೂ ಮತ್ತು ಚೀನ ಹೀಗೆ 8 ಸಾಂಸ್ಕೃತಿಕ ಮತಗಳ ಮಾಹಿತಿ ಮತ್ತು ಪ್ರಪಂಚದಲ್ಲಿ ಪ್ರಸಿದ್ದಿಯಲ್ಲಿರುವ ತಾವೋ, ಜೈನ, ಬೌದ್ಧ, ಯಹೂದಿ, ಪಾರ್ಶಿ, ಕ್ರೈಸ್ತ, ಇಸ್ಲಾಮ್, ಸಿಖ್, ವೈದಿಕ, ಹಿಂದೂ, ಸೂಫಿ, ಷಿಂಟೋ, ಬಹಾಯಿ, ಸಿದ್ಧ-ನಾಥ, ಶೈವ, ಕನ್‌ಫ್ಯೂಷಿಸ್, ವೈಷ್ಣವ, ಹಾಲುಮತ, ಮುಂತಾದ ಅನೇಕ ಧರ್ಮ-ಮತಗಳ ಸಂಸ್ಥಾಪಕರು ಮತ್ತು ಪ್ರವರ್ತಕರು ಪಶುಪಾಲನಾ ಸಮುದಾಯದಿಂದ ಬಂದಿರುವುದದಾಗಿ ಕೃತಿಯಲ್ಲಿ ದಾಖಲಿಸಲಾಗಿದೆ.

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books