ಹ್ಯಾಮ್ಲಿಟ್

Author : ಕೆ.ಎಸ್. ಭಗವಾನ್

Pages 164

₹ 90.00




Year of Publication: 2011
Published by: ತನು ಮನು ಪ್ರಕಾಶನ
Address: ಶ್ರೀರಾಮಪುರ ಎರಡನೇ ಹಂತ, ಮೈಸೂರು

Synopsys

ಕವಿ ಹಾಗೂ ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ ಅವರ ಹತ್ತು ಹಲವು ನಾಟಕಗಳ ಪೈಕಿ ಹಾಮ್ಲಿಟ್ ಸಹ ಒಂದು. ಇದು ದುರಂತ ನಾಟಕ ಎಂದೇ ಪ್ರಸಿದ್ಧಿ ಪಡೆದಿದೆ. ಈ ಕೃತಿಯನ್ನು ಪ್ರೊ. ಕೆ.ಎಸ್. ಭಗವಾನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪರಿಣಾಮಕಾರಿ ಸಂಭಾಷಣೆ, ಮನುಷ್ಯನ ಅಂತರಂಗದ ಕ್ರೌರ್ಯದ ಅನಾವರಣ ಇತ್ಯಾದಿ ಸನ್ನಿವೇಶಗಳು ಓದುಗರ ಗಮನ ಸೆಳೆಯುತ್ತವೆ.

About the Author

ಕೆ.ಎಸ್. ಭಗವಾನ್
(14 July 1945)

ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು.  ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...

READ MORE

Related Books