ಹ್ಯಾಮ್ ಲೆಟ್ (ಡೆನ್ಮಾರ್ಕ್‌ನ ರಾಜಕುಮಾರ)

Author : ಜಿ.ಎಂ. ಕೃಷ್ಣಮೂರ್ತಿ

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಶೆಕ್ಸ್ ಪಿಯರ್ ನ ಪ್ರಸಿದ್ಧ ನಾಟಕಗಳ ಪೈಕಿ ಹ್ಯಾಮ್ ಲೆಟ್ : ಡೆನ್ಮಾರ್ಕ್ ನ ರಾಜಕುಮಾರ (Hamlet: Prince of Denmark) ಸಹ ಒಂದು. ಈತ ಡೆನ್ಮಾರ್ಕ್ ನ ರಾಜಕುಮಾರ. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಲಾಗಿದೆ. ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಈ ನಾಟಕವನ್ನು ಸಣ್ಣ ವೃತ್ತಾಂತವಾಗಿ ಪರಿವರ್ತಿಸಿ, ಮಕ್ಕಳಿಗೆ ತಿಳಿಯುವ ಹಾಗೆ, ಮೂಲ ನಾಟಕದ ವಸ್ತುವಿಗೆ ಧಕ್ಕೆ ಬಾರದ ಹಾಗೆ ನಾಟಕವನ್ನು ರಚಿಸಿದ್ದಾರೆ. ಈ ನಾಟಕವು ದುರಂತದಲ್ಲಿ ಕೊನೆಗೊಳ್ಳುತ್ತದೆ. ಡೆನ್ಮಾರ್ಕ್‌ ರಾಜಕುಮಾರನ ಶೋಚನೀಯ ಕಥೆ ಇದು. ಹ್ಯಾಮ್ ಲೆಟ್ ನ ತಂದೆಯ ಮರಣಾನಂತರ ಆತನ ತಾಯಿ ಹಾಗೂ ಚಿಕ್ಕಪ್ಪನ ಸಂಚನ್ನು ತಿಳಿಯಲು ರಾಜಕುಮಾರ ಯತ್ನಿಸುತ್ತಾನೆ. ಅಂತಿಮವಾಗಿ, ತನ್ನ ತಂದೆಯ ಸಾವಿಗೆ ಈ ಇಬ್ಬರು ಹೇಗೆ ಕಾರಣರು ಎಂಬುದನ್ನು ತಿಳಿದು, ಅವರಿಬ್ಬರ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಾನೆ. ಇದು ಈ ನಾಟಕದ ವಸ್ತು. ಮಕ್ಕಳಿಗೋಸ್ಕರ ನಾಟಕ ಬರೆದಿದ್ದು, ಭಾಷೆಯೂ ತುಂಬಾ ಸರಳಖವಾಗಿದ್ದು, ರಸವತ್ತಾಗಿದೆ.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books