ಹನಿ ಖಜಾನೆ

Author : ಎಚ್. ಡುಂಡಿರಾಜ್

Pages 254

₹ 150.00




Published by: ಅಂಕಿತ ಪುಸ್ತಕ

Synopsys

ಡುಂಡಿರಾಜರೆಂದರೆ ಚುಟುಕು, ಡುಂಡಿರಾಜರೆಂದರೆ ಚಟಾಕಿ. ಅವರು ನಾಲ್ಕೇ ಸಾಲಲ್ಲಿ ಹನಿಸುವ ಹಾಸ್ಯದ ಮಳೆ, ಇಲ್ಲಿ ಖಜಾನೆಯೊಳಗೆ ಭದ್ರವಾಗಿದೆ. ಪದಗಳನ್ನು pun ರೂಪದಲ್ಲಿ ಪೋಣಿಸುವ ಈ ಮಾಂತ್ರಿಕ ಹಾಸ್ಯದೊಂದಿಗೆ ವ್ಯಂಗ್ಯ- ವಿಷಾದಗಳನ್ನೂ ಹರಿಸಬಲ್ಲರು. ಅವರ ’ಹನಿ’ ನೀರಾವರಿ ಯೋಜನೆಯಲ್ಲಿ (!) ಏನುಂಟು ಏನಿಲ್ಲ... 

ಪುಸ್ತಕಮನೆಗಳಲ್ಲಿ ದೀರ್ಘಕಾಲ ಜನಪ್ರಿಯ ಗ್ರಂಥವಾಗಿ ರಾರಾಜಿಸಿದ ಇದು ನಿಮ್ಮ ಮನೆಯ ಕಪಾಟುಗಳಲ್ಲಿ ಇರಲೇ ಬೇಕಾದ ಪುಸ್ತಕಗಳಲ್ಲಿ ಒಂದು. 

About the Author

ಎಚ್. ಡುಂಡಿರಾಜ್
(18 August 1956)

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ.  ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.  2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...

READ MORE

Related Books