ಹನಿಮುತ್ತು

Author : ಶಶಿಕಾಂತ ಪಿ ದೇಸಾಯಿ

Pages 89

₹ 60.00




Year of Publication: 2005
Published by: ಬನಶಂಕರಿ ಪ್ರಕಾಶನ
Address: ರಂಗನಾಥ ಸ್ಮೃತಿ, ರಾಜಾಪೂರ ಸರ್ಕಾರಿ ಶಾಲೆ ಹತ್ತಿರ, ಪ್ರಶಾಂತ ನಗರ "ಎ" ಕಲಬುರಗಿ-585105
Phone: 9480472367

Synopsys

ಶಶಿಕಾಂತ ದೇಸಾಯಿ ಅವರ ಚುಟುಕುಗಳ ಸಂಕಲನ ಹನಿಮುತ್ತು. ಇಲ್ಲಿನ ಚುಟುಕುಗಳಲ್ಲಿ ಭಾವವಿದೆ, ಸಮಕಾಲೀನ ವಿಷಯಗಳಿಗೆ ಸ್ಪಂದನೆಯಿದೆ, ಪ್ರೀತಿಯಿದೆ, ಮೌಢ್ಯತೆಯ ವಿರುದ್ಧದ ಜಾಗೃತಿಯಿದೆ. ಚಿಕ್ಕ ಚುಟುಕುಗಳ ಮೂಲಕ ತನ್ನ ಸುತ್ತಲಿನ ವಿಷಯಗಳಿಗೆ ಸ್ಪಂಧಿಸುವ ಪ್ರಯತ್ನವನ್ನು ಲೇಖಕರು ತಮ್ಮ ಚುಟುಕುಗಳ ಮೂಲಕ ಮಾಡಿದ್ದಾರೆ. 

ವಿಧವೆಯೊಬ್ಬಳ ಬದುಕು

ಕಪ್ಪು ಬಿಳುಪಿನ ಚಿತ್ರ

ಯಾರಾದರೂ ಕುಂಕುಮವಿಟ್ಟು 

ಹೂ ಮುಡಿಸಿದರೆ 

ಅವಳ ಬದುಕೇ ಆಗಬಹುದು

ಈಸ್ಟಮನ್‌ ಕಲರ್‌ ಚಿತ್ರ

 

About the Author

ಶಶಿಕಾಂತ ಪಿ ದೇಸಾಯಿ
(25 December 1966)

ವೃತ್ತಿಯಲ್ಲಿ ಇಂಜಿನಿಯರ್  ಆಗಿರುವ ಶಶಿಕಾಂತ ಪಿ ದೇಸಾಯಿ ಅವರು ಪ್ರವೃತ್ತಿಯಲ್ಲಿ ಬರಹಗಾರ. ಕಥೆ, ಕವನ, ವಿಮರ್ಶೆಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಲಬುರಗಿ ಬಾನುಲಿ ಕೇಂದ್ರದಿಂದ ಐದು ನಾಟಕಗಳು ಬಿತ್ತರಗೊಂಡಿವೆ. ’ಶಿಲ್ಪಿ’ ಎಂಬ ನಾಟಕಕ್ಕೆ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ, ಸಮಾಜ ಕಲ್ಯಾಣ ವಿಭಾಗದ ಎರಡನೇ ಬಹುಮಾನ ದೊರಕಿದೆ. ಈ ನಾಟಕವು ಚಿಂಚೋಳಿ ತಾಂಡಾಗಳಲ್ಲಿನ ಶಿಶು ಮಾರಾಟದ ಕುರಿತು ಹಾಗೂ ಆ ವ್ಯವಸ್ಥೆಯಿಂದ ತಾಯಿಯೊಬ್ಬಳು ತನ್ನ ಮಗುವನ್ನು ಆ ಪಿಡುಗಿನಿಂದ ರಕ್ಷಿಸಿ, ಅವಳನ್ನು ಓದಿಸಿ ಬೆಳೆಸುವಲ್ಲಿ ಸಫಲಳಾಗುತ್ತಾಳೆ. ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷ ಆಯೋಜಿಸುವ ಜಯತೀರ್ಥ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ’ಇನ್ನೂ ಯಾಕ ಬರಲಿಲ್ಲವ್ರು’ ಎಂಬ ...

READ MORE

Related Books