ಹನಿ ನೀರಾವರಿ, ಭವಿಷ್ಯದ ಕೃಷಿಗೆ ವ್ಯವಸ್ಥಿತ ದಾರಿ

Author : ಎ.ಎಸ್. ಕುಮಾರಸ್ವಾಮಿ

Pages 325

₹ 280.00




Year of Publication: 2019
Published by: ಸಪ್ನ ಬಕ್‌ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಹನಿ ನೀರಾವರಿಯಿಂದ ಸುಸ್ಥಿರ ಕೃಷಿ ಸಾಧ್ಯ ಎನ್ನುವುದರ ಬಗ್ಗೆ ಲೇಖಕ ಕುಮಾರಸ್ವಾಮಿ, ಈಗಾಗಲೇ ಹನಿ ನೀರಾವರಿ ವ್ಯವಸ್ಥಿತ ಕೃಷಿಗೆ ದಾರಿ ಎನ್ನುವ ಕೃತಿ ರಚಿಸಿದ್ದಾರೆ. ಇದೇ ನಿಟ್ಟಿನಲ್ಲಿ ಈ ಕೃತಿಯು ಮುಂದಿನ ಭವಿಷ್ಯದ ಕೃಷಿಗೆ ಹೇಗೆ ಸಹಕಾರಿಯಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಈ ಕೃತಿಯು ಮುಖ್ಯವಾಗಿ ನೀರಿನ ಮಿತ ಬಳಕೆ ಎಲ್ಲರ ಹೊಣೆ, ಅಂತರ್ಜಲವೆನ್ನುವ ಮಾಯಾಜಾಲ, ಜಲ ಸಾಕ್ಷಾತ್ಕಾರ- ಭೂಮಿಯಿಂದ ಜಮೀನಿಗೆ, ನೀರು ಸಾಗಾಣಿಕೆಗೆ ಕೊಳವೆ ಮಾರ್ಗ, ನೀರೆತ್ತಲು ಶಕ್ತಿಯ ಮಿತ ಬಳಕೆ ಮತ್ತು ಸೌರಶಕ್ತಿಯ ಬಳಕೆ , ಹನಿ ನೀರಾವರಿ - ಮಿತ ಬಳಕೆಗೆ ಅತ್ಯಂತ ಸೂಕ್ತ ವಿಧಾನ, ಹನಿ ನೀರಾವರಿಯ ಘಟಕಗಳು ಮತ್ತು ಕಾರ್ಯ ವಿಧಾನ, ಹನಿ ನೀರಾವರಿ ವ್ಯವಸ್ಥೆಯ ವಿನ್ಯಾಸ, ಹನಿ ನೀರಾವರಿ ವ್ಯವಸ್ಥೆಯ ನಿರ್ವಹಣೆ, ಕೃಷಿ ನಿರಂತರತೆಗೆ ಭೂ ಚೇತನ, ಪೋಷಕಾಂಶಗಳ ನಿರ್ವಹಣೆ, ಹನಿ ನೀರಾವರಿಯಲ್ಲಿ ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು, ಕರ್ನಾಟಕದಲ್ಲಿ ಹನಿ ನೀರಾವರಿಯ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ.

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books