ಹರೆಯದ ಹರವು

Author : ಯೋಗೇಶ್ ಮಾಸ್ಟರ್‌

Pages 100

₹ 70.00




Published by: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
Phone: 8880660347

Synopsys

ಒಬ್ಬ ವ್ಯಕ್ತಿಯ  ಹರೆಯದ ತಲ್ಲಣಗಳು, ರೋಮಾಂಚನಗಳು ಅನೇಕ ಸಂದರ್ಭದಲ್ಲಿ ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಸಂದರ್ಭದಲ್ಲಿ ಎದುರಾಗುವ ಗಾಯಗಳು ಕೆಲವೊಮ್ಮೆ ಶಾಶ್ವತವಾಗಿ ಉಳಿದು, ಅವನ ಮುಂದಿನ ಬದುಕನ್ನೆಲ್ಲ ನುಚ್ಚು ನೂರು ಮಾಡುವ ಶಕ್ತಿಯನ್ನು ಹೊಂದಿದೆ. ಯೋಗೇಶ್ ಮಾಸ್ಟರ್ ಈಗಾಗಲೇ ಹಲವು ವಿಷಯಗಳ ಕುರಿತು ಬರೆದಿದ್ದಾರೆ. ಈ ಕೃತಿಯಲ್ಲೂ ಅವರು ಯುವಕರ ಮನಸ್ಸನ್ನು ಮನಶ್ಯಾಸ್ತ್ರೀಯ ನೆಲೆಯಲ್ಲಿ ನೋಡಿ, ಅವರ ಭಾವನೆಗಳು ತಲ್ಲಣಗಳು, ಪ್ರೇರಣೆಗಳನ್ನು ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ. ಪ್ರೇಮ ಕಾಮಗಳ ನಡುವೆ ಸಿಲುಕಿಕೊಳ್ಳುವ ಯುವ ಮನಸ್ಸು, ಚಟಗಳ ಚಕ್ರವ್ಯೂಹದಲ್ಲಿ ಸಿಲುಕಿ ಹೊರ ಬರಲಾರದೆ ನರಳುವ ಮನಸುಗಳನ್ನು ಅವರು ಅರ್ಥ ಮಾಡಿಸಲು ಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಹಿರಿಯರ ಮತ್ತು ಸಮಾಜದ ನಿಜವಾದ ಹೊಣೆಗಾರಿಕೆಗಳೇನು ಎನ್ನುವುದು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವನ್ನು ಕೃತಿಯಲ್ಲಿ ಮಾಡುತ್ತಾರೆ. ಈ ಕೃತಿ ವ್ಯಕ್ತಿತ್ವವನ್ನು ಕಟ್ಟುವ ರೂಪಿಸುವ ಕೆಲಸವನ್ನು ಮಾಡುತ್ತದೆ. ಯುವಕರಲ್ಲಿ ಜವಾಬ್ದಾರಿಗಳನ್ನು ನಿರೀಕ್ಷಿಸುವ ಪಾಲಕರು ಈ ಸಂದರ್ಭದಲ್ಲಿ ಹೊತ್ತುಕೊಳ್ಳಬೇಕಾದ ಜವಾಬ್ದಾರಿಗಳನ್ನೂ ನೆನಪಿಸುತ್ತದೆ.

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...

READ MORE

Related Books