ಹರಿದಾದ ನೆನಪ

Author : ಚಂದ್ರಶೇಖರ ವಸ್ತ್ರದ

Pages 112

₹ 50.00




Published by: ಕ್ಷಮಾ ಪ್ರಕಾಶನ
Address: ಬೆಳಗು, ಆನಂದಾಶ್ರಮ ರಸ್ತೆ, ಪಂಚಾಕ್ಷರಿ ನಗರ, ಆರನೇ ಕ್ರಾಸ್, ಗದಗ-582101
Phone: 9448185841

Synopsys

‘ಹರಿದಾದ ನೆನಪ’ ಕೃತಿಯು ಚಂದ್ರಶೇಖರ ವಸ್ತ್ರದ ಅವರ ಲೇಖನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಲಲಿತ ಪ್ರಬಂಧಗಳ ರಚನೆ ನಿಂತೇ ಹೋಯಿತೇನೋ ಎನ್ನುವಷ್ಟು ಅಪರೂಪವಾಗಿರುವ ಈ ದಿನಗಳಲ್ಲಿ ವಸ್ತ್ರದ ಅವರು ನೆನಪುಗಳಲ್ಲಿ ಲಲಿತಮಯವಾಗಿ ಹರಿದಾಡಿದ್ದಾರೆ. ತುಂಟತನ, ಲವಲವಿಕೆ ಇವುಗಳ ಸ್ಥಾಯೀಗುಣ. ಆದರೆ `ತುಂಟತನದ ಹಿಂದೆ ಜೀವನಾನುಭವವಿದೆ. ಶೈಕ್ಷಣಿಕ ಸ್ತರದಲ್ಲಿ ನಡೆಯುವ ವೈಚಿತ್ರಗಳ ವಿಶ್ಲೇಷಣೆ ಇದೆ. ಜಾತ್ಯಾತೀತ ಮನೋಭಾವ ಇದೆ‘ ಎಂಬ ಗುರುಲಿಂಗ ಕಾಪಸೆಯವರು ಬೆನ್ನುಡಿಯಲ್ಲಿ ಹೇಳಿದ್ದಾರೆ.

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books