ಹಸಿರು ಹಾದಿಯ ಕಥನ

Author : ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)

Pages 330

₹ 350.00




Year of Publication: 2022
Published by: ಗೌರಿ ಮೀಡಿಯಾ ಟ್ರಸ್ಟ್
Phone: 9742225779

Synopsys

ಲೇಖಕರಾದ ಗಿರೀಶ್ ತಾಳಿಕಟ್ಟೆ ಮತ್ತು ಕೆ ಎಲ್ ಅಶೋಕ್ ಅವರು ಸಂಪಾದಿಸಿರುವ ಕೃತಿ ಹಸಿರು ಹಾದಿಯ ಕಥನ . ಐದು ದಶಕಗಳ ರೈತ ಹೋರಾಟಗಳ ಚಿತ್ರಣವನ್ನು ಈ ಕೃತಿ ನೀಡುತ್ತದೆ. ಕರ್ನಾಟಕ ರಾಜ್ಯ ರೈತ ಸಂಘವು ಕೇವಲ ರೈತರನ್ನು ಪ್ರತಿನಿಧಿಸುವ ಸಂಘಟನೆ ಮಾತ್ರ ಆಗಿರಲಿಲ್ಲ. ಅದು ಸಾಮಾಜಿಕ, ರಾಜಕೀಯ,ಆರ್ಥಿಕ ಜನಚಳುವಳಿಯೂ ಆಗಿತ್ತು. ಯಾವುದೇ ಚಳವಳಿಯನ್ನು ನಾವು ಉದ್ದೇಶಪೂರ್ವಕವಾಗಿ ತಿದ್ದಿ ಉದ್ದೀಪಿಸಲು ಸಾಧ್ಯವಿಲ್ಲ. ಜನತೆಯಲ್ಲಿ ವ್ಯವಸ್ಥೆ ಮೇಲಿನ ಸಹನೆ ಹದ್ದುಮೀರುವ ಹಂತ ತಲುಪಿದಾಗ ಚಳವಳಿಗಳು ರೂಪುಗೊಳ್ಳಲು ಭೂಮಿಕೆ ಸಿದ್ಧವಾಗುತ್ತದೆ.ಕಾಲದ ಆ ಅಪೇಕ್ಷೆಗೆ ನಾವು ಪ್ರಜಾತಾಂತ್ರಿಕ ನೆಲೆಗಳಲ್ಲಿ ಕ್ರೋಢೀಕರಣದ ರೂಪ ಕೊಟ್ಟಾಗ ಚಳವಳಿ ಮೈದುಂಬುತ್ತದೆ. ಅಲ್ಲಿಯವರೆಗೂ ಚಳವಳಿಗಾರರು ಸೋಲಿನ ಹತಾಶೆಗಳನ್ನು ಲೆಕ್ಕಿಸದೆ ನಿರಂತರ ಪ್ರಯತ್ನಶೀಲರಾಗಿರಬೇಕು. 1972ರಲ್ಲೇ ನಾವು ಶಿವಮೊಗ್ಗ ಕಬ್ಬು ಬೆಳೆಗಾರರ ಸಂಘವನ್ನು ಹುಟ್ಟುಹಾಕಿದರೂ, 1980ರ ನರಗುಂದ ಬಂಡಾಯದವರೆಗೆ ನಮಗೆ ಹೇಳಿಕೊಳ್ಳುವಂತಹ ಭೂಮಿಕೆ ಒದಗಿಬರಲಿಲ್ಲ. ಆದರೂ ನಮ್ಮ ರೈತಪರ ಹೋರಾಟಗಳು ನಿರಂತರವಾಗಿದ್ದವು. ಆ ನಿರಂತರತೆಯೇ ಚಳವಳಿಯ ಜೀವಾಳ. ಇವತ್ತಿನ ಚಳವಳಿಗಾರರು ಇದನ್ನು ಮರೆಯಬಾರದು.ರೈತ ಸಂಘಕ್ಕೆ ಪ್ರಬಲ ಅಡಿಪಾಯ ಒದಗಿಸಿದ್ದು ಶಿವಮೊಗ್ಗ. ರಾಜ್ಯಮಟ್ಟದಲ್ಲಿ ರುದ್ರಪ್ಪನವರು, ಎಂಡಿಎನ್, ಸುಂದೇಶ್ ಹೇಗೆ ಗಟ್ಟಿ ನಾಯಕತ್ವ ಒದಗಿಸಿದರೋ ಹಾಗೆ ಆರಂಭದ ದಿನಗಳಲ್ಲಿ ಶಿವಮೊಗ್ಗದಲ್ಲಿ ರೈತ ಸಂಘಕ್ಕೆ ದಿಟ್ಟ ನಾಯಕತ್ವ ಒದಗಿಸಿದವರಲ್ಲಿ ಬಸವರಾಜಪ್ಪನವರೂ ಒಬ್ಬರು. ರೈತ ಸಂಘದ ಬಗ್ಗೆ ಅವರಿಗಿದ್ದ ಬದ್ಧತೆ, ಸಮರ್ಪಣಾಭಾವ.ಪ್ರಶ್ನಾತೀತ. ಅವೆಲ್ಲವೂ ಈ ಕೃತಿಯಲ್ಲಿ ಅನಾವರಣಗೊಂಡಿವೆ. ರೈತ ಸಂಘದ ಏಳುಬೀಳುಗಳ ಸ್ಕೂಲ ನೋಟ ಇಲ್ಲಿದೆ. ಮುಂದಿನ ಪೀಳೆಗೆಯವರಿಗೆ ಈ ಕೃತಿ ಒಂದು ಆಕರವಾಗಬಲ್ಲದು ಎಂಬುದು ನನ್ನ ಅಭಿಮತ ಎಂಬುದಾಗಿ ಕಡಿದಾಳು ಶಾಮಣ್ಣ ಅವರು ಹೇಳಿದ್ದಾರೆ.

About the Author

ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)
(13 November 1984)

ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಕಾವಲು ಇವರ ಹುಟ್ಟೂರು. ಉದ್ಯೋಗ ಸ್ಫೂರ್ತಿ, ಜಾಬ್‌ನ್ಯೂಸ್, ಗೌರಿ ಲಂಕೇಶ್ ವಾರಪತ್ರಿಕೆ ಮೊದಲಾದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಆರಕ್ಷಕ ಲಹರಿ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ), ಜೆನ್ ಕಥೆಗಳು, ...

READ MORE

Related Books