ಬೌದ್ಧಧರ್ಮ ಹಾಗೂ ಸಾಹಿತ್ಯದಲ್ಲಿ ವಿಶಾಖಾ ಹೆಸರು ಚಿರಪರಿಚಿತ. ಧನಂಜಯಶ್ರೇಷ್ಠಿಯ ಮಗಳು ಈಕೆ. ಭದ್ರಿಕಾ ನಗರದಲ್ಲಿ ಭಗವಂತನಿಗೂ (ಬುದ್ಧ) ಹಾಗೂ ಭಿಕ್ಷು ಸಂಘಕ್ಕೂ ಸತ್ಕರಿಸುತ್ತಾಳೆ. ಮಿಗಾರ ಎಂಬ ಶ್ರೇಷ್ಠಿಯ ಮಗ ಪೂರ್ಣವರ್ಧನ ನೊಂದಿಗೆ ಈಕೆಯ ವಿವಾಹ, ತದನಂತರವೂ ಈಕೆಯ ಧರ್ಮ ಪ್ರೇಮ, ದಾನದ ಉದಾರತೆ, ವಿಶಾಖಾದೇವಿಯ ಪೂರ್ವ ಜನ್ಮದ ಕಥೆ, ನಂತರ ಜೀವಕೆಯ ಹಾಗೂ ಅನಾಥಪಿಂಡಿಕೆಯ ವೃತ್ತಾಂತ ಒಳಗೊಂಡ ಕೃತಿ ಇದು. ಹತ್ತು ಮಕ್ಕಳ ತಾಯಿಯಾದ ವಿಶಾಖಾಳ ಕಥೆ ಮತ್ತು ಹತ್ತು ಮಕ್ಕಳ ತಾಯಿಯಾದ ಸಂಘಕ್ಕೆ ವನವಿಹಾರಗಳನ್ನು ದಾನ ಮಾಡಿದವರ ಕಥೆಗಳ ಸಂಕಲನವಿದು.
©2023 Book Brahma Private Limited.