ಹೆಜ್ಜೆ ಸದ್ದು ನಿಲ್ಲಲಿಲ್ಲ

Author : ಶ್ರೀನಿವಾಸ್ ಗಿಳಿಯಾರು

Pages 200

₹ 240.00




Published by: ಆಕೃತಿ ಆಶಯ
Address: ಮಂಗಳೂರು
Phone: 08242972002

Synopsys

‘ಹೆಜ್ಜೆ ಸದ್ದು ನಿಲ್ಲಲಿಲ್ಲ’ ಕೃತಿಯು ಡಾ. ಶ್ರೀನಿವಾಸ ಗಿಳಿಯಾರು ಹಾಗೂ ರಮೇಶ್ ಮಂಜೇಶ್ವರ ಅವರ ಪ್ರಧಾನ ಸಂಪಾದಕತ್ವದಲ್ಲಿ ಮೂಡಿಬಂದಿರುವ ವಿಮರ್ಶಾ ಸಂಕಲನವಾಗಿದೆ. ಇಲ್ಲಿನ ಲೇಖಕರು, ಕೃತಿಕಾರನ ಹಂಗನ್ನು ಕಡಿದುಕೊಂಡು, ಮಸುಮ (ಮೆರಿನಾಪುರ ಸುರೇಶ)  ಕೃತಿಗಳಲ್ಲಿ ಸಾಹಿತ್ಯ ಸೌಂದರ್ಯ, ಜೀವನ ಪ್ರೀತಿ, ಕನಸುಗಾರಿಕೆ ಕುರಿತು ಮಾತನಾಡಿದ್ದಾರೆ. ಡಾ. ಮಾಧವ ಪೆರಾಜೆಯವರು ಕಾವ್ಯ ಭಾಷೆಯ ಕುರಿತು ಚರ್ಚಿಸಿ ಮಸುಮ ಕವನಗಳನ್ನು 'ಮೇಘಕ್ಕೆ ತಾಗುವ ಕಾವ್ಯ' ಎಂದು ವರ್ಣಿಸಿದ್ದಾರೆ. ಡಾ. ದಿನೇಶ್ ನಾಯಕ್ ಕಾರಾಜೆರವರು ಮಸುಮಸಿಟ್ಟು, ಆಕ್ರೋಶ ವ್ಯಕ್ತಪಡಿಸುವ ವ್ಯಕ್ತಿಯಾಗಿ ಹಲವು ಲೇಖಕರು ಗುರುತಿಸಿದ್ದು, ಆದರೆ ಸಿಟ್ಟು ಆಕ್ರೋಶಗಳು ಅವರ ಕಾವ್ಯದಲ್ಲಿ ಗೈರು ಹಾಜರಾಗುವ ಕುತೂಹಲಕಾರಿ ಅಂಶವನ್ನು ಗುರುತಿಸಿದ್ದಾರೆ. ಕೃತಿಗಳ ವಿಶ್ಲೇಷಣೆಗೆ ಸಾಹಿತ್ಯೇತರ ಅರಿವಿನ ಚೌಕಟ್ಟುಗಳನ್ನು ಅಂದರೆ ರಮೇಶ್ ಮಂಜೇಶ್ವರ ಅವರು 'ಲಿಂಗ', 'ಲೈಂಗಿಕತೆ' 'ಜಾತಿ', ಶ್ರೀನಿವಾಸ ಹೊಡೆಯಾಲರವರು 'ಮಾಧ್ಯಮ', ಡಾ. ಪ್ರಕಾಶ್ ಪಿಂಟೊರವರು 'ಗ್ರಾಮೀಣ ಆರ್ಥಿಕತೆ', ಡಾ. ಶ್ರೀನಿವಾಸಗಿಳಿಯಾರು ಅವರು 'ಆಧುನಿಕೋತ್ತರ ಸಾಮಾಜಿಕ ಚೌಕಟ್ಟು' ಇತ್ಯಾದಿ ಪರಿಕಲ್ಪನೆಗಳನ್ನು ಬಳಸಿಕೊಂಡಿದ್ದಾರೆ. ಕೃತಿಗಳನ್ನು ವಿವರಣಾತ್ಮಕವಾಗಿ ಓದುವ ಪ್ರಯತ್ನವನ್ನೂ ಹಲವು ಲೇಖಕರು ಮಾಡಿದ್ದಾರೆ. ಮಗದು ಸಾಹಿತ್ಯ ಕೃತಿ ನಿಲ್ಲಲಿಲ್ಲ. ಹೆಜ್ಜೆ ಮಸುಮ ಅವರ ಕೃತಿಗಳನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ, ಆರ್ಥಿಕ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲಿಟ್ಟು ಕನ್ನಡ ಸಾಹಿತ್ಯ / ಕರಾವಳಿ ಭಾಗದ ಕನ್ನಡ ಸಾಹಿತ್ಯದಲ್ಲಿ ಮಸುಮ ಅವರ ಸ್ಥಾನ ಎಂಥದ್ದು ಎನ್ನುವ ನಿರ್ಣಯ ತೆಗೆದುಕೊಳ್ಳುವ ಬಹುಮುಖ್ಯ ಪ್ರಯತ್ನವನ್ನು ಇಲ್ಲಿನ ಲೇಖನಗಳು ಮಾಡಿವೆ.

About the Author

ಶ್ರೀನಿವಾಸ್ ಗಿಳಿಯಾರು

ಶ್ರೀನಿವಾಸ್ ಗಿಳಿಯಾರು ಅವರು ಮೂಲತಃ ಮಂಗಳೂರಿನವರು. ತಮ್ಮ ಪದವಿ ವಿದ್ಯಾಭ್ಯಾಸವನ್ನು ಮಂಗಳೂರಿನ ಮಂಗಳ ಗಂಗೋತ್ರಿ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದ್ದು, ಹಲವಾರು ಸಾಹಿತ್ಯ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೃತಿಗಳು : ಹೆಜ್ಜೆ ಸದ್ದು ನಿಲ್ಲಲಿಲ್ಲ, ದಲಿತ ಅಭಿವೃದ್ಧಿ ಸಾಹಿತ್ಯ ಸಂಸ್ಕೃತಿ ...

READ MORE

Related Books