‘ಹೆಜ್ಜೆಗಳು’ ಡಾ. ವಾಣಿ ರಾವ್ ಅವರ ಆತ್ಮಚರಿತ್ರೆಯಾಗಿದೆ. ಇದಕ್ಕೆ ಪ್ರೊ. ರಮೇಶ್ ರಾವ್ ಹಾಗೂ ಡಾ. ಸುರೇಶ್ ರಾವ್ ಅವರ ಬೆನ್ನುಡಿ ಬರಹವಿದೆ: ಈ 90 ವಸಂತಗಳನ್ನು ಕಂಡ, ಅಂದಿನಿಂದ ಇಂದಿನವರೆಗೆ, ನಡೆದುಬಂದ, ವೈವಿದಧ್ಯಮಯ ಪರಿಸರದಲ್ಲಿ, ಸಾಂಸಾರಿಕ ಬಂಧನದ ನಡುವೆಯೂ, ಇಟ್ಟ ಹೆಜ್ಜೆಗಳ ಗಟ್ಟಿತನವನ್ನು ಬಲಪಡಿಸಿ ಸಿಕ್ಕ ಅವಕಾಶವನ್ನೇ ಕಂಡೂ ಕಾಣದ, ತಿಳಿದು ತಿಳಿಯದ, ಸಾಮಾಜಿಕ ಬಿಗಿ ಚೌಕಟ್ಟುಗಳೊಳಗೇ ಮುಳುಗಿದ್ದವರ ಏಳ್ಗೆಗಾಗಿ ಶ್ರಮಿಸಿದ ದಿಟ್ಟ ಮಹಿಳೆ ಎನ್ನಬಹುದು. ಹೆಜ್ಜೆಗಳ ಸಂಧಿಯಲ್ಲಿ ಸಿಕ್ಕ ಗಂಟುಗಳನ್ನು ತುಳಿದು ಹಾಕದೇ, ಬಿಡಿಸಿಕೊಂಡು ನಡೆದ ಧೀಮಂತೆಯ ಅನುಭವಗಳ ಕಿರು ಪರಿಚಯ ಇಲ್ಲಿದೆ.
©2025 Book Brahma Private Limited.