ಹೆಣ್ಣು ಹೆಜ್ಜೆ

Author : ಕೆ.ಎಸ್. ಪವಿತ್ರ

Pages 144

₹ 110.00




Year of Publication: 2021
Published by: ಸ್ನೇಹಾ ಎಂಟರ್ಪ್ರೈಸಸ್
Address: ನಂ.138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ಡಾ.ಕೆ.ಎಸ್.ಪವಿತ್ರ ಅವರ ವೈದ್ಯಕೀಯ ಲೇಖನಗಳ ಸಂಕಲನ ‘ಹೆಣ್ಣು ಹೆಜ್ಜೆ’. ಈ ಲೇಖನ ಸಂಕಲನಕ್ಕೆ ಡಾ.ಆರ್ ಪೂರ್ಣಿಮಾ ಅವರು ಮುನ್ನುಡಿ ಬರೆದಿದ್ದು,‘ಮುಷ್ಟಿಯಷ್ಟು ಮಿದುಳು, ಹಿಡಿಯಷ್ಟು ಹೃದಯ ಇರಬಹುದು. ಆದರೆ ಅವುಗಳಲ್ಲಿ ಹೊಮ್ಮುವ ಆಲೋಚನೆಗಳ ಆಳ ಅಗಲಗಳು ಕಲ್ಪನಾತೀತ. ಈ ಕಗ್ಗತ್ತಲ ಮಹಾಲೋಕಕ್ಕೆ ಡಾ. ಪವಿತ್ರ ಮನೋವೈದ್ಯದ ವೈಜ್ಞಾನಿಕ ಕಂದೀಲು ಹಿಡಿದು ನಮ್ಮನ್ನು ಕರೆದೊಯ್ಯುತ್ತಾರೆ. ಸಾಮಾಜಿಕ ವಿಶ್ಲೇಷಣೆಯ ಹಿಲಾಲು ಹಿಡಿದು ಅರ್ಥ ಮಾಡಿಸುತ್ತಾರೆ. ಮನೋರೋಗಕ್ಕೆ ಮದ್ದುಂಟು ಎಂದು ಸಮಾಧಾನ ಮಾಡುತ್ತಾರೆ. ಮತ್ತು ಬದುಕಿನ ಇಕ್ಕಟ್ಟು ಬಿಕ್ಕಟ್ಟುಗಳನ್ನು ಬಿಡಿಸಿಕೊಳ್ಳುವ ವಿಧಾನಗಳನ್ನು ತಿಳಿಗನ್ನಡದಲ್ಲಿ ತಿಳಿಸುತ್ತಾರೆ.ವೈದ್ಯರಿಗೂ ಲೇಖಕರಿಗೂ ಅಥವಾ ಎಲ್ಲರಿಗೂ ಅತ್ಯಗತ್ಯವಾಗಿ ಇರಬೇಕಾದ ಸಾಮಾಜಿಕ ಸಂವೇದನೆ ಡಾ. ಪವಿತ್ರ ಅವರ ಬರವಣಿಗೆಯ ಮೂಲದ್ರವ್ಯ. ಎಲ್ಲ ಆರೋಗ್ಯ ಸಮಸ್ಯೆಗಳೂ ಒಂದು ಅರ್ಥದಲ್ಲಿ ಸಾಮಾಜಿಕ ಸಮಸ್ಯೆಗಳೇ ಎನ್ನುವುದನ್ನು ಅವರ ಲೇಖನಗಳು ಬಗೆಬಗೆಯಲ್ಲಿ ವಿವರಿಸುತ್ತವೆ. ಆಮೇಲೆ ಅದಕ್ಕೂ ಮಿಗಿಲಾಗಿ ಎಲ್ಲೆಡೆಯೂ ಹೆಣ್ಣು ಹೆಜ್ಜೆಗಳನ್ನು ಅರಸುವ ಅವರ ಕಣ್ಣು, ವಿಷಯಕ್ಕೆ ಹೊಸ ನೋಟಗಳನ್ನು ಕೊಡುತ್ತದೆ ಎನ್ನುವುದೂ ವಿಶೇಷವಾಗಿ ಗಮನಾರ್ಹ’ ಎಂದಿದ್ದಾರೆ.

About the Author

ಕೆ.ಎಸ್. ಪವಿತ್ರ

ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು.  11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...

READ MORE

Related Books