ಹಿಂದೂ ರಾಷ್ಟ್ರೀಯತೆ

Author : ಗಂಗಾರಾಂ ಚಂಡಾಳ

Pages 312

₹ 295.00




Year of Publication: 2018
Published by: ಮಣಿ ಪ್ರಕಾಶನ
Address: # 2, 2ನೇ ಅಡ್ಡರಸ್ತೆ, 3ನೇ ಮಹಡಿ, ಕೋಣೆ ಸಂಖ್ಯೆ :1, ಮುನೇಶ್ವರ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು-560003.

Synopsys

ಲೇಖಕ ಗಂಗಾರಾಂ ಚಾಂಡಾಳ ಅವರು ಬರೆದ ಚಿಂತನಾತ್ಮಕ ಕೃತಿ-ಹಿಂದೂ ರಾಷ್ಟ್ರೀಯತೆ. ಹಿಂದೂ ಧರ್ಮದ ಹೆಸರಿನಲ್ಲಿ ಬಹುಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚುವ ಈ ದೇಶದಲ್ಲಿ ರಾಷ್ಟ್ರೀಯತಾ ಭಾವ ಮೂಡುವುದು ಅಸಾಧ್ಯ. ಹಿಂದೂ ಧರ್ಮವು ಜನರನ್ನು ಒಗ್ಗೂಡಿಸುವ ಬದಲು ಜಾತಿ ವ್ಯವಸ್ಥೇಯನ್ನು ಸಮರ್ಥಿಸಿಕೊಳ್ಳುತ್ತಾ ದೇಶದ ಜನರನ್ನು ವಿಭಜಿಸುತ್ತಿದೆ. ಅವು ಬದುಕನ್ನು ಅಸಹನೀಯಗೊಳಿಸುತ್ತಿದೆ. ಆದರೆ, ಹಿಂದೂ ಧರ್ಮದ ವಾರಸುದಾರರಂತೆ ವರ್ತಿಸುವ ಕೆಲವೇ ಕಲವು ಶೇಕಡಾವಾರು ಜನತೆ, ಇಡೀ ದೇಶದ ಶ್ರಮಿಕ ವರ್ಗದ ಶ್ರಮವನ್ನು ಶೋಷಣೆ ಮಾಡುವ ಮೂಲಕ ತಾನು ಸಂಭ್ರಮ ಪಡುತ್ತಿದೆ. ಹಿಂದೂ ಧರ್ಮದಡಿಯೇ ಎಲ್ಲರೂ ಇರಬೇಕು ಏಂದು ಬಲವಂತದ ಒತ್ತಾಯ ಹೇರಿ ವ್ಯಕ್ತಿಗತ ಆಯ್ಕೆ ಹಾಘೂ ಹಕ್ಕುಗಳನ್ನು ಕಸಿತುತ್ತಿದೆ. ಇಂತಹ ವಿಚಾರಗಳ ಮೊತ್ತವಾಗಿರುವ ಈ ಕೃತಿಯು, ಓದಿಗರನ್ನು ಮತ್ತೊಂದು ಪ್ರಖರ ನೆಲೆಯಲ್ಲಿ ವಿಚಾರಿಸುವಂತೆ ಪ್ರೇರೇಪಿಸುತ್ತದೆ. ಹಿಂದೂ ಒಂದು ಧರ್ಮವೇ, ಅದರಿಂದ ರಾಷ್ಟ್ರೀಯ ಭಾವ ಮೂಡುವುದು ಸಾಧ್ಯವೆ ಇಂತಹ ಸಂಗತಿಗಳನ್ನು ಲೇಖಕರು ಚರ್ಚೆಗೆ ಒಳಪಡಿಸಿದ್ದಾರೆ.

About the Author

ಗಂಗಾರಾಂ ಚಂಡಾಳ

ಲೇಖಕ ಗಂಗಾರಾಂ ಚಂಡಾಳ ಅವರು ಕೋಲಾರ ಜಿಲ್ಲೆಯ ಯಡಹಳ್ಳಿ (ಜನನ: 18-06-1961) ಗ್ರಾಮದವರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ.  ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ಯು.ಆರ್.ಪಿ ವತಿಯಿಂದ (2005) ಎಂ.ಟೆಕ್ ವ್ಯಾಸಂಗ ಪೂರೈಸಿದರು. ಕನ್ನಡ, ತೆಲುಗು, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರು.  ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ ಸಂಘಟನೆಯಿಂದ ಸಮಾಜ ಸೇವೆಯಲ್ಲಿ ನಿರತರು. ಗೋಕಾಕ್ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ., ಸಮ್ಮೇಳನ, ಉತ್ಸವಗಳು ...

READ MORE

Related Books