ಹಿಂಗಿದ್ರು ನಮ್ ಕಮ್ತಿ

Author : ಕೃಷ್ಣಾನಂದ ಕಾಮತ್

₹ 35.00




Published by: ಕೃಷ್ಣಾನಂದ ಕಾಮತ ಪ್ರತಿಷ್ಠಾನ
Address: ಕಾಮತ ಕುಟೀರ, ಲಕ್ಷ್ಮೀನಾರಾಯಣ ನಗರ, ಹೊನ್ನಾವರ- 581334

Synopsys

‘ಹಿಂಗಿದ್ರು ನಮ್ ಕಮ್ತಿ’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ಸಂಪಾದಿತ ಕೃಷ್ಣಾನಂದ ಕಾಮತರ ಕುರಿತ ಬರವಣಿಗೆಯಾಗಿದೆ. ಡಾ. ಕಮಲಾ ಹೆಮ್ಮಿಗೆ, ಕಾಮತರು ಇನ್ನಿಲ್ಲವಾದೊಡನೆ ಹೃದಯಸ್ಪರ್ಶಿ ಲೇಖನವೊಂದನ್ನು 'ವಿಜಯ ಕರ್ನಾಟಕ' ದಲ್ಲಿ ಬರೆದಿದ್ದರು. ಅದು ಅಸಂಖ್ಯರ ಮನಸ್ಸನ್ನು ತಟ್ಟಿತು. ಕೈಯಾರೆ, ಕಾಮತರಿಂದ 'ಮರುಪಯಣ' ದ ಪ್ರತಿಯನ್ನು ಪಡೆದು ಓದಿ, ಆನಂದಿಸಿದ್ದರು. ಕನ್ನಡ ಸಾಹಿತ್ಯದಲ್ಲೇ ಅದೊಂದು ವಿಶಿಷ್ಟ ಕೃತಿ ಎಂಬುದು ಅವರ ನಂಬಿಕೆ. ಆ ಪುಸ್ತಕ ಕುರಿತೇ ಇಲ್ಲಿ ಬರೆದಿದ್ದಾರೆ.

ಜ್ಯೋತ್ಸ್ನಾ ಕಾಮತ್ ಅವರು ಸಂಪಾದಕೀಯ ನುಡಿಯಲ್ಲಿ ಕೆಲವೊಂದು ವಿಚಾರಗಳನ್ನು ಹೀಗೆ ಪ್ರಸ್ತಾಪಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಲೆಸಿರುವ ಡಾ. ಶ್ರೀವತ್ಸ ದೇಸಾಯಿ ಲೇಖನ ಬರೆಯುವಂತಾದದ್ದು ಆಕಸ್ಮಿಕ. ಕಂಪ್ಯೂಟರ್‌ ಬಳಕೆಯಷ್ಟಾಗಿ ರೂಢಿ ಮಾಡಿಕೊಳ್ಳದ ಇವರಿಗೆ 'ಕಾಮತ್ ಡಾಟ್ ಕಾಮ್' ಕಣ್ಣಿಗೆ ಬಿದ್ದದ್ದೇ ತಡವಾಗಿ ಅಂತೆ. ಆದರೆ ವೀಕ್ಷಿಸುತ್ತ ಹೋದಂತೆ, ಅದು ತನ್ನ ಮೇಲೆ ಬೀರಿದ ಪ್ರಭಾವವನ್ನು ದೀರ್ಘವಾದ ಈ-ಮೇಲ್ ಮೂಲಕ ತೋಡಿಕೊಂಡರು. ಅವರ ಕನ್ನಡ ಪ್ರೇಮ ಗುರುತಿಸಿ, ಗುರುಪುತ್ರರಾಗಿರುವ ಅವರಿಗೆ ಒಂದು ಕಿರುಲೇಖನ ಬರೆಯಲು ವಿನಂತಿಸಿಕೊಂಡಾಗ ಕೂಡಲೇ ಬರೆದು ಕಳಿಸಿದರು. ಇಲ್ಲಿ ಕೆಲವು ಪತ್ರಗಳನ್ನು ಸೇರ್ಪಡೆ ಮಾಡಲಾಗಿದೆ. ಖ್ಯಾತ ಸಾಹಿತಿ, ದಿವಂಗತ ನಿರಂಜನರು, ಮೊದಲಲ್ಲಿ ಕಾಮತರ ಪುಸ್ತಕಗಳನ್ನು ಓದಿರಲಿಲ್ಲ. ಕಾಮತರನ್ನು ಭೇಟಿ ಮಾಡಿದ ಬಳಿಕ ಅವರ ಮೊದಲ ಕೃತಿಗಳನ್ನು ತರಿಸಿಕೊಂಡು 1981ರ ಸುಮಾರಿಗೆ ಓದಿದರು. ಪತ್ರ ಮುಖೇನ ತಿಳಿಸಿದ ಅವರ ಪ್ರಾಂಜಲವಾದ ಮೆಚ್ಚಿಗೆ ಮನಸ್ಸನ್ನು ಮುಟ್ಟುತ್ತದೆ. ಪ್ರಸಿದ್ಧ ಸಾಹಿತಿ, ಡಾ. ಎಸ್.ಎಲ್. ಭೈರಪ್ಪನವರು ಕಾಮತರ ಬರವಣಿಗೆಯನ್ನು ತುಂಬ ಇಷ್ಟಪಟ್ಟವರು. ಮುಖತಃ ಅದನ್ನು ಅನೇಕ ಬಾರಿ ವ್ಯಕ್ತ ಮಾಡಿದ್ದಾರೆ. 'ಕಮ್ಮಟ್ಟಿಗೆ ದಲ್ಲಿ ಚಿಕ್ಕ, ಚೊಕ್ಕ ಸ್ಮರಣಾಂಜಲಿಯನ್ನು ಕೊಡಮಾಡಿದ್ದಾರೆ. ಕಾಮತರ 'ಕಾಲರಂಗ' ಕುರಿತ ಪ್ರತಿಕ್ರಿಯೆ ಇಲ್ಲಿ ಕಾಣಿಸಿದ ಕಿರುಪತ್ರದಲ್ಲಿದೆ. ಸಾಹಿತಿ ದಿ. ಎಂ.ಎಸ್.ಕೆ. ಪ್ರಭು ಅವರ ಕಾಮತರ 'ಮಧ್ಯ ಪ್ರದೇಶದ ಮಡಿಲಲ್ಲಿ' ಓದಿ ವ್ಯಕ್ತಪಡಿಸಿದ ಪ್ರತಿಕ್ರಿಯೆ, ಕಾಮತರ ಶಾಲಾ ಸಹಪಾಠಿ ಹೊನ್ನಾವರ ಬಳಿಯ ಹೊಸಾಡದ ಶಿ.ಹ. ನಾಯಕರು ಮುಂಬೈಯಿಂದ ಬರೆದ ಪತ್ರ, 'ಕಮ್ಮಟ್ಟಿಗೆ' ಓದಿ ತನಗನಿಸಿದ ವಿಚಾರಗಳನ್ನು ಬರೆದ ಹೈದರಾಬಾದದ ಎಚ್.ವಿ. ಸಾವಿತ್ರಮ್ಮನವರ ಪತ್ರಗಳನ್ನು ಇಲ್ಲಿ ಕೊಡಲಾಗಿದೆ. ಸ್ಟಾರೆಸ್‌ದ ಅರಣ್ಯಶಾಸ್ತ್ರದ ಕಾಲೇಜಿನಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾನೆ. ಕಾಮತರನ್ನು ಸ್ಮರಿಸಿಕೊಂಡ ಮದನ್ ಪಂಡಿಲಾರ ಈ-ಮೇಲಿನ ಪತ್ರವನ್ನು ಕೊಟ್ಟಿದೆ. ಇವೆಲ್ಲ ಪತ್ರಗಳು ಕಾಮತರ ಬರವಣಿಗೆ ಹಾಗೂ ವ್ಯಕ್ತಿತ್ವದ ಹೊಳಹುಗಳ ಮೇಲೆ ಬೆಳಕು ಚೆಲ್ಲುತ್ತವೆ. 'ಅನುಬಂಧ' ದಲ್ಲಿ ಕಾಮತರ ಸ್ವ-ವಿವರಗಳನ್ನು ಕೊಟ್ಟಿದೆ. ಭರದಿಂದ ನಾಶವಾಗುತ್ತಿರುವ ನಿಸರ್ಗದ ಸಮತೋಲn ಕುರಿತು ಕೃಷ್ಣಾನಂದರಿಗೆ ಹೆಚ್ಚಿನ ಕಳವಳವಿತ್ತು ಎಂದು ಪ್ರಸ್ತಾಪಿಸಿದ್ದಾರೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books