ಹಿರಿಯ ಕಿರಿಯ ಹಕ್ಕಿಗಳು

Author : ಶಿವರಾಮ ಕಾರಂತ

Pages 129

₹ 110.00




Year of Publication: 2019
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಹಿರಿಯ ಕಿರಿಯ ಹಕ್ಕಿಗಳು-ಡಾ. ಕೆ. ಶಿವರಾಮ ಕಾರಂತ ಸವರ ಕೃತಿ. ವಿಜ್ಞಾನ-ವಿಸ್ಮಯವನ್ನು ಪರಿಚಯಿಸುವ ಕೃತಿ. ಮೈಸೂರು ವಿಶ್ವವಿದ್ಯಾಲಯದ ಗೃಹ ಸರಸ್ವತಿ ಗ್ರಂಥಮಾಲೆಗಾಗಿ ರಚಿಸಲ್ಪಟ್ಟ ಪುಸ್ತಕವಿದು.  ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ವಿವಿಧ ವಂಶಗಳು, ಪಕ್ಷಿಗಳ ಅಂಗೋಪಾಂಗಗಳು, ಹೊಟ್ಟೆಯ ಪಾಡು, ಪಕ್ಷಿಗಳ ವಲಸೆ, ಸಂತಾನ ಸಂಗೋಪನೆ-ಮೊದಲಾದ ಅಧ್ಯಾಯಗಳಲ್ಲಿ ಹಕ್ಕಿಗಳ ಕುರಿತು, ಅವುಗಳ ವಿವಿಧ ತಳಿಗಳ ಕುರಿತು ಹಲವಾರು ಉಪಯುಕ್ತ ಮಾಹಿತಿಗಳನ್ನು ಲೇಖಕ ಡಾ. ಕೆ. ಶಿವರಾಮ ಕಾರಂತ ಅವರು ಒದಗಿಸಿದ್ದಾರೆ. 

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು 1971ರಲ್ಲಿ (ಪುಟ: 129) ಮೊದಲ ಬಾರಿಗೆ ಈ ಕೃತಿಯನ್ನು ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books