ಹಿರೋಶಿಮಾದ ಹೂವುಗಳು

Author : ವಿಜಯ್ ನಾಗ್‌ ಜಿ.

₹ 200.00




Year of Publication: 2022
Published by: ಸೃಷ್ಟಿ ಪಬ್ಲಿಕೇಷನ್ಸ್
Address: #1445, 3ನೇ ಕ್ರಾಸ್, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜನಗರ, ಬೆಂಗಳೂರು-560079
Phone: 9480966668

Synopsys

ಲೇಖಕ ವಿಜಯ್ ನಾಗ್‌ ಜಿ. ಅವರ ಅನುವಾದಿತ ಕೃತಿ ಹಿರೋಶಿಮಾದ ಹೂವುಗಳು. ಆರ್.ದಿಲೀಪ್ ಕುಮಾರ್ ಅವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. 'ಪ್ಲವರ್ಸ್ ಆಫ್ ಹಿರೋಶಿಮಾ' ಜಗತ್ತಿನ 39 ಭಾಷೆಗಳಗೆ ಅನುವಾದವಾಗಿದ್ದು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ.ವಿಜಯ್ ನಾಗ್ ಅವರಿಂದ ಬರುತ್ತಿರುವುದು  ಸಂತೋಷದ ವಿಷಯ. ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ ನೋವು, ಹತಾಶೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಾದಂಬರಿಗಳ ಪಟ್ಟಿ ಹೇಗೆ - ದೊಡ್ಡದಿದೆಯೋ, ಹಾಗೆಯೇ ಮನುಷ್ಯ ಪ್ರಕೃತಿಯ ಮೇಲೆ, ಕೊನೆಗೆ ತನ್ನೊಡನೆ ಇರುವ ಮನುಷ್ಯನ ಮೇಲೆಯೇ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಹವಣಿಸಿ ಮಾಡಿಕೊಂಡ ಅಪಾಯಗಳ ಕುರಿತು ರಚನೆಯಾದ ಕಾದಂಬರಿಗಳ ಪಟ್ಟಿಯೂ ಅಷ್ಟೇ ಇದೆ. 'ಹಿರೋಶಿಮಾದ ಹೂವುಗಳು' ಈ ಪಟ್ಟಿಗೆ ಬರುವ ಕಾದಂಬರಿ, ಮನುಜಕುಲ ಎದುರಿಸಿದ. ಇಂದೂ ಭಯದಲ್ಲೇ ಇರುವ ಬಹುದೊಡ್ಡ ಅಪಾಯಗಳು ಅಣುಬಾಂಬ್ ಮತ್ತು ಜೈವಿಕ ಅಸ್ತ್ರಗಳು. ಲಿಟಲ್ ಬಾಯ್ ಮತ್ತು ಫ್ಯಾಟ್ ಬಾಯ್ ಎಂಬೆರಡುಗಳಿಂದ ನಾಶವಾದ ಹಿರೋಶಿಮಾ ಮತ್ತು ನಾಗಾಸಾಕಿಗಳೆಂಬ ಅವಳಿ ಪಟ್ಟಣಗಳಲ್ಲಿ ಒಂದಾದ, ಹಿರೋಶಿಮಾ ನಗರದಲ್ಲಿನ ಒಂದು ಕುಟುಂಬಕ್ಕೆ ಒದಗಿದ ದುಃಸ್ಥಿತಿಯನ್ನು ಕೇಂದ್ರವಾಗುಳ್ಳ ಕಾದಂಬರಿಯಿದು, ಒಂದಿಡೀ ಭೂಭಾಗದ ಜನರ ವ್ಯಥೆಯನ್ನು ಕಾದಂಬರಿಯಲ್ಲಿ ಕಾಣಿಸದೆ, ಹಾಗೆ ಕಾಣಿಸಿ ಕಾದಂಬರಿಯ ಗಾತ್ರವನ್ನು ಹೆಚ್ಚು ಮಾಡದೇ, ಒಂದು ಕುಟುಂಬ 'ರೇಡಿಯೇಟ್'ಗೆ ಸಿಕ್ಕು ನರಳಿದ ಕಥೆ ಈ ಕಾದಂಬರಿಯ ವಸ್ತುವಾಗಿದೆ. ಗಾತ್ರದಲ್ಲಿ ಕಿರಿದಾದರೂ ಅದರ ಕಲಾತ್ಮಕತೆ, ಸಾರುತ್ತಿರುವ ಆಶಯಗಳಲ್ಲಿ ಹಿರಿದಾಗಿದೆ. ಕಾದಂಬರಿಯ ರಚನೆಗೆ ಮಾಡಿಕೊಂಡಿರುವ ವಸ್ತುವಿನ ಆಯ್ಕೆಯೇ ಶಕ್ತಿಯುತವಾಗಿದೆ. ಹಾಗೆಯೇ ಮತ್ತೂ ಅಂತಹ ಅಪಾಯಗಳಿಂದ ದೂರವಿರುವಂತೆ ಓದುಗರನ್ನು ಆಲೋಚಿಸುವಂತೆ ಮಾಡುತ್ತಿದೆ ಎಂದು ಬೆನ್ನುಡಿಯಲ್ಲಿ ಅವರು ಹೇಳಿದ್ದಾರೆ.

About the Author

ವಿಜಯ್ ನಾಗ್‌ ಜಿ.

ಮೈಸೂರಿನ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಗ್ರಂಥಾಲಯ ಸಹಾಯಕರಾಗಿರುವ ವಿಜಯ್ ನಾಗ್ ಜಿ ಅವರು ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳೆಂದರೆ ಜಿಮ್ ಗ್ರೀನ್ ಅವರ ಆಂಗ್ಲ ಕೃತಿ-“ ಆಲ್ಬರ್ಟ್ ಐನ್‍ಸ್ಟೀನ್: ಆಯ್ದ ಬರಹಗಳು”; “ಜೆನ್ ಅನುಭವ”.ಥಾಮಸ್ ಹೂವರ್ ರಚಿಸಿರುವ “ ದಿ. ಝೆನ್ ಎಕ್ಸ್ಪಿರೀಯನ್ಸ್’ ಎಂಬ ಕೃತಿಯ ಅನುವಾದ. “ ಜಪಾನಿನ ಕಥೆಗಳು” ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ “ ಮಹಾ ವಿಜ್ಞಾನಿ ನಿಕೋಲಾ ಟೆಸ್ಲಾ ಜೀವನ ಚರಿತ್ರೆ” ಹಾಗೂ “ಅವಿಪ್ಸ” ಎಂಬ ಕೃತಿಗಳೂ ಸಹ ಪ್ರಕಟಣೆಯ ಹಂತದಲ್ಲಿವೆ. ಸಾಹಿತ್ಯ ಮತ್ತು ಅನುವಾದ ಕ್ಷೇತ್ರದ ಕಾರ್ಯಗಳಿಗಾಗಿ ಕುವೆಂಪು ...

READ MORE

Related Books