ಹೊನ್ಕಲ್ ರ ಹೊನ್ನುಡಿಗಳು

Author : ಸಿದ್ಧರಾಮ ಹೊನ್ಕಲ್

Pages 120

₹ 100.00




Year of Publication: 2018
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ಕಲಬುರ್ಗಿ.
Address: ವೀರಶೈವ ಹಾಸ್ಟೆಲ್ ಕಾಂಪ್ಲೇಕ್ಸ, ಸೇಡಂ ರಸ್ತೆ, ಅನ್ನಪೂರ್ಣ ಆಸ್ಪತ್ರೆ ಸಮೀಪ, ಕಲಬುರ್ಗಿ.

Synopsys

ಸಿದ್ದಾರಾಮ ಹೊನ್ಕಲ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ಹೆಜ್ಜೆಗಳನ್ನಿರಿಸಿದ ಬಹು ಭರವಸೆಯ  ಬರಹಗಾರ. ಇವರ ಜೀವನದ ಅನುಭವಗಳ ಕುರಿತಾಗಿ ಬರೆದ  ಹೊನ್ಕಲ್ ರ ಹೊನ್ನುಡಿಗಳು ಎಂಬ ಈ ಕೃತಿಯನ್ನು ರಚಿಸಿದ್ದಾರೆ.  ಇವರ  ಈ ನುಡಿಗಳಲ್ಲಿ ದರ್ಶನ ಮತ್ತು ಮಾರ್ಗದರ್ಶನವಿದೆ. ಈ ನುಡಿಗಳು ಆಕಾರದಲ್ಲಿ ವಾಮನ ಅರ್ಥದಲ್ಲಿ ’ ತ್ರಿವಿಕ್ರಮ’ ಸಣ್ಣ ಸಣ್ಣ ಮಾತುಗಳಲ್ಲಿರುವ ವಿಷಯ ವಿಚಾರಗಳು ಮನ ಮುಟ್ಟುತ್ತವೆ. ಅವರ ಅನುಭವಕ್ಕೆ ಧಕ್ಕಿದ ಎಲ್ಲ ವಿಷಯಗಳನ್ನು ಹೊನ್ಕಲ್ ಅವರು ಈ ಕೃತಿಯಲ್ಲಿ  ವಿವರಿಸಿದ್ದಾರೆ. 

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Related Books