ಹೂಬಾಣ

Author : ಚಿದಂಬರ ನರೇಂದ್ರ

Pages 112

₹ 100.00




Year of Publication: 2018
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401
Phone: 9886133949

Synopsys

‘ಹೂಬಾಣ’  ಬಿಲ್ಲಣನ ಪ್ರೇಮ ಪದ್ಯಗಳ ಕನ್ನಡಾನುವಾದ. ಬಿಲ್ಲಣನೆಂದರೆ ಉತ್ತರ ಕಾಶ್ಮೀರದಿಂದ ದಕ್ಷಿಣದ ಕನ್ನಡನಾಡಿಗೆ ಬೀಸಿಬಂದ ಚುಂಬಕ ಗಾಳಿ. ಸರಸ ಸಾಹಿತ್ಯದ ಸಾತ್ವಿಕ ಸಾರಸ್ವತ. ಉಳಿದ ಸಂಸ್ಕೃತ ಕವಿಗಳಂತೆ ‘ಶತಕ’ದ ಮೋಹಕ್ಕೆ ಬೀಳದೆ ಐವತ್ತು ಪದ್ಯಗಳಿಗೆ ಪ್ರಪಂಚವನೇ ಪರವಶಗೊಳಿಸಿದವನು. ಪರಮ ಪೋಲಿ ಕವಿತೆಗಳನ್ನು ಅದೆಷ್ಟು ನಯವಾಗಿ, ಹಿತವಾಗಿ, ಹೆಚ್ಚೆಚ್ಚು ಸರಸವಾಗಿ ಬರೆಯಬಹುದೆಂಬುದನು ನಮಗೆ ತೋರಿಸಿಕೊಟ್ಟ ಶೃಂಗಾರ ಕಾವ್ಯಗುರು.

ಕವಿಯೊಬ್ಬ ರಾಜಕುಮಾರಿಯೊಂದಿಗೆ ಕಳೆದ ಸರಸಗಳಿಗೆಗಳ ನೆನಪು ಈ ಐವತ್ತು ಪುಟ್ಟ ಪದ್ಯಗಳಲ್ಲಿ ಮೂಡಿಬಂದಿವೆ. ಅದು ನಿಜವೋ ಅಥವಾ ಕಲ್ಪನಾ ವಿಲಾಸವೋ ಯಾರಿಗೆ ಗೊತ್ತು. ನಮಗೆ ಬೇಕಾದ್ದು ಕಾವ್ಯ. ಆ ಕಾವ್ಯವನ್ನು ಕವಿ ಚಿದಂಬರ ನರೇಂದ್ರರು ಇಂಗ್ಲಿಷಿನ ಹಲವು ಆವೃತ್ತಿಗಳನ್ನು ಓದಿ, ಒಂದು ಇಡಿಯಾದ ಅನುವಾದದ ಮೂಲಕ ಸುಲಭವಾದ, ಅಪ್ಯಾಯಮಾನಕರವಾದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊದಲ ಪುಟದ ಮೊದಲ ಪದ್ಯದಲ್ಲೇ ರೋಮಾಂಚನಕ್ಕೆ ಸಿಲುಕುವ ಓದುಗನು ಪ್ರತಿ ಪುಟದಲ್ಲೂ ಆಹಾ ಎನ್ನದೆ ವಿಧಿಯಿಲ್ಲ.

About the Author

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ ಅವರು ಮೂಲತಃ ಧಾರವಾಡದವರು. ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಪ್ರಸ್ತುತ ಬೆಂಗಳೂರಿನ ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನಿಮಾ, ಸಾಹಿತ್ಯದ ಓದು-ಬರಹ, ಕಾವ್ಯಾನುವಾದ ಅವರ ಹವ್ಯಾಸಗಳು. ಝೆನ್, ಸೂಫಿ ಕಾವ್ಯಮಾರ್ಗ ಮತ್ತು ಪಾಶ್ಚಿಮಾತ್ಯ-ಪೌರಸ್ತ್ಯ ಕವಿತೆಗಳ ಅನುವಾದದಲ್ಲಿ ಆಸಕ್ತರು. ‘ಚುಕ್ಕಿ ತೋರಸ್ತಾವ ಚಾಚಿ ಬೆರಳ’ ಅವರ ಮೊದಲ ಪ್ರಕಟಿತ ಕವನ ಸಂಕಲನ. ...

READ MORE

Related Books