ಹೂ ಬಿಸಿಲಿನ ನೆರಳು ನೂರೆಂಟು ಮಾತು-4

Author : ವಿಶ್ವೇಶ್ವರ ಭಟ್

Pages 184

₹ 130.00




Year of Publication: 2011
Published by: ಅಂಕಿತ ಪುಸ್ತಕ
Address: #53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು 560004
Phone: 0802661 7100

Synopsys

‘ಹೂ ಬಿಸಿಲಿನ ನೆರಳು’ ಕೃತಿಯು ವಿಶ್ವೇಶ್ವರ ಭಟ್ ಅವರ  ಅಂಕಣ ಬರಹಗಳ ಸಂಗ್ರಹ ಕೃತಿ-ನೂರೆಂಟು-4. ಕೃತಿಗೆ ಬೆನ್ನುಡಿ ಬರೆದ ಕಮಲಿ ಹೆದ್ದಾರಿ ಅವರು, ‘ಹೂ ಬಿಸಿಲು ಬಿಸಲೂ ಅಲ್ಲ. ಅದರ ನೆರಳು ನೆರಳೂ ಅಲ್ಲ. ಆದರೆ ಅವರೆಡೂ ಕೊಡುವ ತಂಪು ಮಾತ್ರ ತಂಪುತಂಪು. ಹೂ ಬಿಸಿಲಿಗೆ ಒಡ್ಡಿಕೊಳ್ಳುವ ಸುಖವೇ ಸುಖ. ನೆರಳು ಯಾವುದಾದರೇನು, ಅದು ಕೊಡುವ ಹಿತವೇ ಹಿತ. ಇಲ್ಲಿನ ಬರಹಗಳ ಬಗ್ಗೆ ಇದೇ ಮಾತು ಹೇಳಬೇಕೆನಿಸಿತು. ಒಂದೊಂದು ಬರಹಗಳ ಬಿಸಿಲಿಗೆ ಮನಸ್ಸನ್ನು ಬೆಚ್ಚಗೆ ಕಾಯಿಸಿಕೊಂಡ ಅನುಭವ, ಗಿಳಿ ಚುಂಚ ಕಂಡರೆ ಹಣ್ಣುಗಳಿಗೆ ಕಡಿಸಿಕೊಳ್ಳುವ ಆಸೆಯಂತೆ, ಹಾತೊರೆಯುವ ಮನಸ್ಸುಗಳಿಗೂ ಓದುವ ಆಸೆ, ಹೂ ಬಿಸಿಲಿನ ನೆರಳಲ್ಲಿ ಆ ಆಸೆ ಮೊಟ್ಟೆಯೊಡೆದಾವು’ ಎಂದಿದ್ದಾರೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books