ಹೊಸ ಹಾದಿಯ ಹರಿಕಾರ ಹ್ಯೂಗೋ ಚಾವೆಜ್ ಜೀವನ-ಸಾಧನೆ

Author : ಸಿ.ಆರ್‌. ಕೃಷ್ಣರಾವ್

Pages 48

₹ 25.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಹೊಸ ಹಾದಿಯ ಹರಿಕಾರ ಹ್ಯೂಗೋ ಚಾವೆಜ್ ಜೀವನ-ಸಾಧನೆ’ ಕೃತಿಯು ಸಿ.ಆರ್. ಕೃಷ್ಣರಾವ್ ಅವರ ಸಂಕಲನವಾಗಿದೆ. ಪರಕೀಯರಿಂದ ತಾಯ್ದಾಡನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಜಗತ್ತಿಗೇ ಪಾಠ ಕಲಿಸಿಕೊಡಬಲ್ಲ ದಿಟ್ಟ ವ್ಯಕ್ತಿತ್ವವೆಂದರೆ ವೆನಿಜುವೇಲಾದ ಅಧ್ಯಕ್ಷ ಗೋ ಚಾವೆಜ್. ಕ್ಯೂಬಾದೊಂದಿಗೆ ಬಾಂಧವ್ಯ ಸ್ಥಾಪಿಸಿ, ದೇಶದ ತೈಲೋದ್ಯಮವನ್ನು ರಾಷ್ಟ್ರೀಕರಣಗೊಳಿಸಿ, ಶಿಕ್ಷಣದಲ್ಲಿ ಸುಧಾರಣೆ ತಂದು ಪ್ರಗತಿಗೆ ಜಾಗತೀಕರಣ ಉದಾರೀಕರಣಗಳೇ ಬೇಕಿಲ್ಲ. ಪರ್ಯಾಯ ವ್ಯವಸ್ಥೆಗಳು ಬೇಕಾದಷ್ಟಿವೆಯೆಂದು ಜಗತ್ತಿಗೆ ತೋರಿಸಿಕೊಟ್ಟವರು ಅವರು. ಒಟ್ಟಾರೆಯಾಗಿ ಈ ಕೃತಿಯು ಚಾವೆಜ್ ಅವರ ಬದುಕಿನ ಹಲವಾರು ಘಟ್ಟಗಳನ್ನು ತಿಳಿಸುತ್ತದೆ. 

About the Author

ಸಿ.ಆರ್‌. ಕೃಷ್ಣರಾವ್

ವಿದ್ವಾಂಸ,  ಹಿರಿಯ ಪತ್ರಕರ್ತ, ಸಂಘಟಕ, ಲೇಖಕ ಸಿ.ಆರ್‌. ಕೃಷ್ಣರಾವ್‌ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ನವಕರ್ನಾಟಕದ ವಿವಿಧ ಬೃಹತ್ ಯೋಜನೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿರುತ್ತಾರೆ. 2023 ಸೆಪ್ಟೆಂಬರ್ 10 ನಿಧನ.  ಕೃತಿಗಳು: ಸ್ವಾತಂತ್ಯ್ರ ನಂತರದ ಭಾರತ, ನೊಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ), ಕರ್ನಾಟಕ ಕಲಾದರ್ಶನ ಸಂಪುಟ-1, ಬದುಕಿನ ತಿರುವುಗಳು (ಆತ್ಮಕಥೆ), ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ನಿಘಂಟು -ಇವರ ಸಂಪಾದಿತ ಕೃತಿ.  'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ'.ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.    ...

READ MORE

Reviews

(ವಿಮರ್ಶೆ ಜೂನ್ 2013, ಹೊಸತು ಪರಿಚಯ)

ಸಮರ್ಥ ಆಡಳಿತಗಾರನೊಬ್ಬ ವಸಾಹತುಶಾಹಿ ವ್ಯವಸ್ಥೆಯನ್ನು ಧಿಕ್ಕರಿಸಿ ಪರಕೀಯರಿಂದ ತಾಯ್ದಾಡನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಜಗತ್ತಿಗೇ ಪಾಠ ಕಲಿಸಿಕೊಡಬಲ್ಲ ದಿಟ್ಟ ವ್ಯಕ್ತಿತ್ವವೆಂದರೆ ವೆನಿಜುವೇಲಾದ ಅಧ್ಯಕ್ಷ ಗೋ ಚಾವೆಜ್. ಅಮೆರಿಕದ ಬ೦ಡವಾಳಶಾಹಿಯ ಹಿಡಿತದಲ್ಲಿ ಉಸಿರುಕಟ್ಟಿ ನಲುಗುತ್ತಿದ್ದ ವ್ಯವಸ್ಥೆಯ ವಿರುದ್ಧ, ತನ್ನ ಸುತ್ತಲ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳನ್ನು ಸಂಘಟಿಸಿ ದಬ್ಬಾಳಿಕೆಯ ವಿರುದ್ಧ ಸೆಟೆದುನಿಂತ ದೇಶಪ್ರೇಮಿ ನಾಯಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ದೇಶವನ್ನು ಕೊಳ್ಳೆಹೊಡೆಯಲು ಬಿಡದೆ ತನ್ನ ದೇಶದ ಸಂಪನ್ಮೂಲಗಳನ್ನು ತನ್ನ ಪ್ರಜೆಗಳ ಒಳಿತಿಗಾಗಿ ಬಳಸಿ ಜನಾನುರಾಗ ಗಳಿಸಿ ಆಡಳಿತ ನಡೆಸಿದವರು ಚಾವೆಜ್ ಪ್ರಾರಂಭದಲ್ಲಿ ಎಷ್ಟೇ ಅಡೆತಡೆಗಳು ಒದಗಿಬಂದರೂ, ಬಂಧಿತರಾಗಿ ಸೆರೆಮನೆ ಕಂಡರೂ ಅದಮ್ಯ ಉತ್ಸಾಹದಿಂದ ಆಶಾವಾದಿಯಾಗಿ ಮಿಂಚಿದವರು. ಕ್ಯೂಬಾದೊಂದಿಗೆ ಬಾಂಧವ್ಯ ಸ್ಥಾಪಿಸಿ, ದೇಶದ ತೈಲೋದ್ಯಮವನ್ನು ರಾಷ್ಟ್ರೀಕರಣಗೊಳಿಸಿ, ಶಿಕ್ಷಣದಲ್ಲಿ ಸುಧಾರಣೆ ತಂದು ಪ್ರಗತಿಗೆ ಜಾಗತೀಕರಣ ಉದಾರೀಕರಣಗಳೇ ಬೇಕಿಲ್ಲ. ಪರ್ಯಾಯ ವ್ಯವಸ್ಥೆಗಳು ಬೇಕಾದಷ್ಟಿವೆಯೆಂದು ಜಗತ್ತಿಗೆ ತೋರಿಸಿಕೊಟ್ಟವರು ಅವರು ಇಂದಿನ ಪುರೋಗಾಮಿ ರಾಷ್ಟ್ರಗಳು ಇಂಥ ವ್ಯಕ್ತಿತ್ವದ ಬಗ್ಗೆ ಅರಿಯಬೇಕಾದ ತುರ್ತು ಬಹಳ ಇದೆ. ಅವರ ಬಗ್ಗೆ ಇದೊಂದು ಪುಟ್ಟ ಪುಸ್ತಿಕೆ - ಜಾಗತಿಕ ವಿದ್ಯಮಾನಗಳ ಬಗ್ಗೆ ಸಮರ್ಥವಾಗಿ ಬೆಳಕು ಚೆಲ್ಲುವ ಸಾಮರ್ಥ್ಯ ಇರುವ ಲೇಖಕ, ಪತ್ರಕರ್ತ ಶ್ರೀ ಸಿ. ಆರ್. ಕೃಷ್ಣರಾವ್‌ ಅವರಿಂದ

 

 

Related Books