ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ

Author : ಎಸ್. ಅನಂತನಾರಾಯಣ

Pages 471

₹ 300.00




Year of Publication: 2011
Published by: ಡಿ.ವಿ.ಕೆ. ಮೂರ್ತಿ ಪ್ರಕಾಶನ
Address: 1498/1, ರಾಮಯ್ಯ ರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು-570004.

Synopsys

ಪ್ರೊ. ಎಸ್. ಅನಂತನಾರಾಯಣ ಅವರ ಕೃತಿ-ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ. ಇಂಗ್ಲಿಷ್ ಸಾಹಿತ್ಯದ ಮೂಲಕವೇ ಕನ್ನಡ ಕವಿಗಳು ವಿಭಿನ್ನ ನೆಲೆಯಲ್ಲಿ, ಹೊಸ ಆಲೋಚನೆಯಲ್ಲಿ ಕವಿತೆಗಳನ್ನು ರಚಿಸಿದ್ದು ಸ್ಪಷ್ಟವಿದೆ. ಈ ಪ್ರಭಾವ ಹೇಗಿದೆ, ಅದರ ಸ್ವರೂಪವೇನು? ಕನ್ನಡಿಗ ಕವಿಗಳ ಆಲೋಚನೆ ಕ್ರಮದಲ್ಲಿ, ಕವನ ಕಟ್ಟುವಿಕೆಯಲ್ಲಿಯ ತಾಜಾತನ ಯಾವುದು? ಭಾರತೀಯ ಸಾಹಿತ್ಯ- ಸಂಸ್ಕೃತಿಯನ್ನು ಅವರು ನೋಡಿದ ಪರಿ ಹೇಗಿದೆ ಇಂತಹ ಆಲೋಚನೆಯಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ.

About the Author

ಎಸ್. ಅನಂತನಾರಾಯಣ
(30 November 1925 - 25 August 1992)

ಎಸ್. ಅನಂತನಾರಾಯಣ  ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು.  ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ.  ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...

READ MORE

Related Books