ಹೊಸಗನ್ನಡದ ಅರುಣೋದಯ

Author : ಶ್ರೀನಿವಾಸ ಹಾವನೂರ

Pages 692

₹ 250.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ ಜೆ.ಸಿ ರಸ್ತೆ, ಬೆಂಗಳೂರು-560002

Synopsys

‘ಹೊಸಗನ್ನಡದ ಅರುಣೋದಯ’ ಕೃತಿಯು ಶ್ರೀನಿವಾಸ ಹಾವನೂರ ಅವರ ಪರಿಷ್ಕೃತ ತೃತೀಯ ಆವೃತ್ತಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಹಾ. ಮಾ. ನಾಯಕ ಅವರು, ಹೊಸಗನ್ನಡದ ಅರುಣೋದಯ ಒಂದು ಅಪರೂಪದ ಆಕರ ಗ್ರಂಥ. ಶ್ರೇಷ್ಠವಾದ ಸಂಶೋಧನಾ ಗ್ರಂಥ. ಕೇವಲ ಚರಿತ್ರೆಯ ಅಂಶಗಳು ತುಂಬಿಕೊಂಡಿರದೇ ವಿಮರ್ಶೆಯೂ ಮೌಲ್ಯಮಾಪನವೂ ಈ ಬರಹದಲ್ಲಿ ಹೊಳವು ಹಾಕಿರುವುದು ಒಂದು ವಿಶೇಷ. ಅತ್ಯುತ್ತಮವಾದ ಸಾಹಿತ್ಯ ಚರಿತ್ರೆ ಮಾಡಬೇಕಾದ ಕೆಲಸವೇ ಇದು. ಕೆಲ ಸಂದರ್ಭಗಳಲ್ಲಿ , ಹಾವನೂರರು ಮೌಲಿಕವಾಗಿ ವಿಚಾರ ವಿವೇಚನೆ ಮಾಡಿದ್ದಾರೆ: ಹೊಸ ಆಧಾರಗಳನ್ನು ಕಲೆಹಾಕಿದ್ದಾರೆ. ಕ್ರೈಸ್ತ ಮಿಶನರಿಗಳ ಸಾಹಿತ್ಯದ ಇತಿಮಿತಿಗಳನ್ನೂ ಕೊಡುಗೆಗಳನ್ನೂ ಇಲ್ಲಿ ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಮುದ್ರಣಾಲಯಗಳು ಆರಂಭವಾಗಿ ಬೆಳೆದುಕೊಂಡ ಬಂದ ಬಗೆಯನ್ನು ವಿವರಿಸಿರುವುದು ಈ ಗ್ರಂಥದ ಅತ್ಯುಪಯುಕ್ತವಾದ ಒಂದು ಭಾಗವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books