ಹೊಸ್ತೋಟ ಮಂಜುನಾಥ ಭಾಗವತ

Author : ವಿಜಯ ನಳಿನಿ ರಮೇಶ

Pages 32

₹ 10.00




Year of Publication: 2009
Published by: ಕರ್ನಾಟಕ ಜಾನಪದ ಪರಿಷತ್ತು
Address: ಜಲದರ್ಶಿನಿ ಲೇಔಟ್‌, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ಹೊಸ ಬಿಇಎಲ್ ರಸ್ತೆ, ಬೆಂಗಳೂರು

Synopsys

ಯಕ್ಷಗಾನಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು ಹೊಸ್ತೋಟ ಮಂಜುನಾಥ ಭಾಗವತರು. ಯಕ್ಷಗಾನ ಶೈಲಿಯ ಬಗೆಗೆ ಚಿಂತಿಸಿ, ಲಯ ಸಾಕ್ಷಾತ್ಕಾರ ಮಾಡಿಕೊಂಡು, ಸ್ಪಷ್ಟವಾದ ಸೂತ್ರ ನಿರೂಪಿಸಿ, ರೂಢಿಗೆ ತಂದರು. ಯಕ್ಷಗಾನದ ಸಪ್ತತಾಳಗಳನ್ನು ನಿರ್ದಿಷ್ಟಪಡಿಸಿ ಕುಣಿತದ ರೂಪಗಳನ್ನು ರೂಪಿಸಿದರು. ನಾಲ್ಕು ಬಗೆಯ ಲಯಗಳನ್ನು ಗ್ರಹಿಸಿ, ತಾಳ ಲಯ ಮಟ್ಟು ಕುಣಿತಗಳ ಖಚಿತ ಜ್ಞಾನದಿಂದ ವಸ್ತು ನಿಷ್ಠತೆಗೆ ಆದ್ಯತೆ ನೀಡಿದರು. ಹದಿನೆಂಟು ರಾಗಸಾಹಿತ್ಯದ ಬಗ್ಗೆ ಪ್ರಭುತ್ವ ಪಡೆದರು. ಪ್ರಾದೇಶಿಕ ಭೇದ ತೊಡೆದುಹಾಕಲು ಪ್ರಯತ್ನಿಸಿದರು. ಹಲವು ಗ್ರಂಥ ರಚನೆಯಿಂದ ಹೆಸರಾದರು. ಅಂಧ ಮಕ್ಕಳಿಗೂ ಯಕ್ಷಗಾನ ಕಲಿಸಿದರು. ಯಕ್ಷಗಾನ ಚಿಂತನೆ, ತರಬೇತಿ, ಪ್ರಯೋಗ, ಗ್ರಂಥರಚನೆ, ಪ್ರಾತ್ಯಕ್ಷಿಕೆ ಉಪನ್ಯಾಸಗಳಿಂದ ಯಕ್ಷ ಋಷಿ ಎನಿಸಿರುವ ಹೊಸ್ತೋಟ ಮಂಜುನಾಥ ಅವರ ಕುರಿತು ಈ ಕೃತಿಯು ಸಮಗ್ರ ಮಾಹಿತಿ ನೀಡುತ್ತದೆ.

About the Author

ವಿಜಯ ನಳಿನಿ ರಮೇಶ
(02 March 1949)

ಹಿರಿಯ ಯಕ್ಷಗಾನ ತಜ್ಞೆ, ಸಾಹಿತಿ ಡಾ. ವಿಜಯ ನಳಿನಿ ರಮೇಶ್‌ ಅವರು ಮೂಲತಃ ಶಿರಸಿಯವರು. ಇವರು ಜನಿಸಿದ್ದು 1949 ಮಾರ್ಚ್‌ 2 ರಂದು. ಸಾಗರ ಹಾಗೂ ಶಿರಸಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಯಕ್ಷಗಾನ ಕುರಿತು ಅಧ್ಯಯನ ನಡೆಸಿರುವ ಇವರು ರಚಿಸಿರುವ ಕೃತಿ ಹೊಸ್ತೋಟ ಮಂಜುನಾಥ ಭಾಗವತ್‌.   ...

READ MORE

Related Books