ಹೊಟ್ಟೆ ಪಾಡಿನ ಮಾಕೆ೯ಟಿನಲ್ಲಿ ಸುಳ್ಳಿನ ಮಾರಾಟ

Author : ಗೊರೂರು ಅನಂತರಾಜು

Pages 152

₹ 150.00




Year of Publication: 2022
Phone: 9449462879

Synopsys

ರಂಗಭೂಮಿ ಕುರಿತಾದ ವಿಮಶಾ೯ ಕೃತಿ. ಜಗತ್ತಿನ ರಂಗಭೂಮಿಯ ಇತಿಹಾಸದಲ್ಲಿ ಷೇಕ್ಸ್ ಪಿಯರ್, ಮೋಲಿಯೇರ್ ಮುಂತಾದವರ ಜತೆ ನಿಲ್ಲುವ ಮತ್ತೊಂದು ಹೆಸರು ಬ್ರೆಕ್ಟ್. ಕೃತಿಯ ಮೊದಲ ಲೇಖನ ಬ್ರೆಕ್ಟ್ ನ ಜೀವನ ಮತ್ತು ನಾಟಕ ಕುರಿತಾಗಿ ಬರೆದಿದ್ದು. ಸ್ವಾತಂತ್ರ್ಯ ಪ್ರಿಯ ಕವಿಗೆ ಹಂಗಿನ, ಪರದೇಶಿ ಜೀವನ ಸಾಕು ಎಂಬುದನ್ನು ಬ್ರೆಕ್ಟ್ ತನ್ನ ಕಾವ್ಯದಲ್ಲಿ ಹೊಟ್ಟೆಪಾಡಿಗೆಂದು ಪ್ರತಿನಿತ್ಯ ಮಾಕೆ೯ಟ್ಟಿಗೆ ಹೋದರೆ ಅಲ್ಲಿ ನಡೆಯುತ್ತದೆ ಸುಳ್ಳಿನ ಮಾರಾಟ ಎಂಬುದಾಗಿ ಹೇಳಿದ್ದಾನೆ. ಬ್ರೆಕ್ಟ್ ನಂತೆಯೇ ಚಿತ್ರನಟ ಟಿ. ಎನ್. ಬಾಲಕೃಷ್ಣರ ರಂಗಭೂಮಿಯ ಅಲೆಮಾರಿ ಬದುಕು ಬೇರೊಂದು ರೀತಿಯಲ್ಲಿ ತೆರೆದುಕೊಳ್ಳುತ್ತದೆ ಬಿ. ಎನ್. ಚನ್ನಪ್ಪನವರ ಆತ್ಮಕಥನ ಆಧರಿಸಿದ ಲೇಖನ ಒಂದು ಕಾಲಘಟ್ಟದಲ್ಲಿ ರಂಗಕಥನ ತೆರೆದಿಡುತ್ತದೆ. ಬರಹಕ್ಕಿಂತ ಸ್ಥಾನಕ್ಕೆ ಬೆಲೆ ಎಂದು ನೊಂದುಕೊಂಡವರು ನೂರಕ್ಕೂ ಹೆಚ್ಚು ನಾಟಕಗಳ ಕತೃ೯ ಬೇಲೂರು ಕೃಷ್ಣಮುತಿ೯. ಕನ್ನಡ ದುರಂತ ನಾಟಕಗಳ ರಚನೆಯಲ್ಲಿ ಸಂಸರು ಮೊದಲಿಗರು. 1919ರಲ್ಲಿ ಗುಬ್ಬಿ ವೀರಣ್ಣ ನಾಟಕ ಕಂಪೆನಿಗೆ ಕೃಷ್ಣ ಲೀಲಾ ನಾಟಕ ಬರೆದುಕೊಟ್ಟ ಬೆಳ್ಳಾವೆ ನರಹರಿ ಶಾಸ್ತ್ರಿಗಳು 36 ನಾಟಕ ಗಳನ್ನು ಬರೆದು ಪೌರಾಣಿಕ ರಂಗಭೂಮಿ ಬೆಳಗಿಸಿದರು. ಕನ್ನಡದ ಷೇಕ್ಸ್‌ಪಿಯರ್‌ ಎಂದೇ ಕರೆಯಲ್ಪಡುವ ಕಃದಗಲ್ ಹನುಮಂತ ರಾಯರ ಕಕ್ತರಾತ್ರಿ ನಾಟಕವನ್ನು ಮೈಸೂರಿನಲ್ಲಿ ನೋಡಿ ಲೇಖಕರು ರಿವ್ಯೂ ಬರೆದಿರುವರು. ಚೌಡುವಳ್ಳಿಪುಟ್ಟರಾಜು ಅವರ ಕೆಂಪೇಗೌಡ ನಾಟಕ ಲೇಖಕರು ಓದಿ ಪ್ರತಿಕ್ರಿಯಿಸಿದ ಬರೆದಿದ್ದಾರೆ. ಅಭಿಷೇಕ ನಾಟಕ ಭಾಸನು ರಚಿಸಿದ ಶ್ರೀ ರಾಮಾಯಣ ಆಧಾರಿತ ನಾಟಕಗಳಲ್ಲಿ ಮೊದಲನೆಯದು. ಡಾ. ಲೀಲಾ ಪ್ರಕಾಶ್ ಅವರ ಕನ್ನಡ ಅಭಿಷೇಕ ನಾಟಕಮ್ ಭಾಷಾಂತರಕ್ಕೆ ಪ್ರಗಲ್ಪವಾದ ಪೀಠಿಕೆಯನ್ನು ಬರೆದಿದ್ದಾರೆ. ಹಾಸನ ಜಿಲ್ಲೆಗೆ ರಂಗಭೂಮಿಯ ಕೊಡುಗೆ ವಿಜಯ ತೆಂಡೂಲ್ಕರ್ ಅವರ ಪತ್ರಿಕೋದ್ಯಮದ ಒಳಸುಳಿಯ ಕಮಲಾ ನಾಟಕ, ಅ. ನ. ಕೃ. ಮೊದಲ ನಾಟಕದ ಸ್ವಾನುಭವ, ಈ ರೋಮನ್ ನಾಟಕಕಾರ ತೆರೆನ್ಸ್ ನ ಅಂದ್ರೋಸಿನ ಕನ್ಯೆ, ಡಿ.ಎಸ್.ಚೌಗಲೆಯವರ ದಿಶಾಂತರ ಮತಾಂತರ ಧಮಾ೯ಂಥತೆಯ ಹಿನ್ನೆಲೆ ವಿಷ್ಣು ವಧ೯ನ ಶಾಂತಲೆ, ಈ ಕನಕದಾಸರ ಜೀವನ ನಾಟಕ.. ಹೀಗೆ ರಂಗಭೂಮಿ ಕುರಿತಾದ ಕೃತಿ. ಗೊರೂರು ಅನಂತರಾಜು ಅವರ ಅಧ್ಯಯನ ವ್ಯಾಪ್ತಿ ವಿಶ್ವದಗಲಕ್ಕೆ ವಿಸ್ತರಿಸಿದೆ.

About the Author

ಗೊರೂರು ಅನಂತರಾಜು
(13 May 1961)

ಹಾಸನ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಚಿರಪರಿಚಿತರಾದ ಗೊರೂರು ಅನಂತರಾಜು ಸಾಹಿತಿಯಾಗಿ, ನಾಟಕಕಾರರಾಗಿ, ರಂಗಭೂಮಿಯ ಕಲಾವಿದರಾಗಿ, ಹವ್ಯಾಸಿ ಪತ್ರಕರ್ತರಾಗಿ ಪ್ರಸಿದ್ದಿ ಪಡೆದವರು.ಇವರು ಹುಟ್ಟಿ ಬೆಳೆದದ್ದು ಗೊರೂರು ಗ್ರಾಮದಲ್ಲಿ. 13-05-1961 ಜನಿಸಿದ ಇವರ ತಂದೆ ಬಸವರಾಜು ಮತ್ತು ತಾಯಿ ಪುಟ್ಟಲಕ್ಕ್ಷ್ಮಮ್ಮ . ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಸ್ವಗ್ರಾಮ ಗೊರೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದು ಹೇಮಾವತಿ ನೀರಾವರಿ ನಿಗಮದಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಲೇ ಹಾಸನದ ಕೃಷ್ಣ ಸಂಜೆ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡಿದ್ದಾರೆ. ಪ್ರಥಮ ಧರ್ಜೆ ...

READ MORE

Related Books